ಬೆಳ್ತಂಗಡಿ: ಪಾರಸ್ ಪೃಥ್ವಿ ಜ್ಯುವೆಲ್ಸ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಕ್ಕಳಿಗೆ ಮೂರು ವಿಭಾಗದಲ್ಲಿ ಕೃಷ್ಣ ವೇಷ ಸ್ಪರ್ಧೆಯನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಸಂಗೀತ ಗುರುಗಳಾದ ಪಿ.ಡಿ. ಸುರೇಶ್ ಬೆಳ್ತಂಗಡಿ ಯವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶಿಕ್ಷಕಿಯರಾದ ಸೇವಂತಿ, ಬೇಬಿಂದ್ರ, ಹಾಗೂ ಶಾಖಾ ಪ್ರಬಂಧಕ ಅಶೋಕ್ ಬಂಗೇರ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನೀಸರ್ ನಡೆಸಿಕೊಟ್ಟರು.
ಮುದ್ದು ಕೃಷ್ಣ ವಿಭಾಗದಲ್ಲಿ ಇಶಾ ಪ್ರಥಮ, ರಿಯಾಂಶ್ ದ್ವಿತೀಯ, ದೀರ್ಘವ್ ಶೆಟ್ಟಿ ತೃತೀಯ, ಬಾಲಕೃಷ್ಣ ವಿಭಾಗದಲ್ಲಿ ಪ್ರೀಶ ಪ್ರಥಮ, ಸಾಹಿತ್ಯ ದ್ವಿತೀಯ, ದಕ್ಷ ತೃತೀಯ ಹಾಗೂ ರಾಧಾಕೃಷ್ಣ ವಿಭಾಗದಲ್ಲಿ ಐಶಾನಿ-ಆದ್ಯ ಪ್ರಥಮ, ಯಶ್ವಿತ್ -ಚಮನ್ ಹೆಚ್ ಬಂಗೇರ ದ್ವಿತೀಯ, ಹಾಗೂ ಯಶ್ವನಿ-ಜಿಯಾ ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ.