ಸುಲ್ಕೇರಿ: ಬ್ರಹ್ಮಗಿರಿ ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಮಿತಿಯ ನೇತೃತ್ವದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು. ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಮಿತಿಯ ಗೌರವಾಧ್ಯಕ್ಷ ಸುಧೀರ್ ಎಸ್.ಪಿ. ಅವರು ದೀಪಪ್ರಜ್ವಲನೆ ಮಾಡುವುದರ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ, ಆಟಿ ತಿಂಗಳಲ್ಲಿ ನಮ್ಮ ಹಿರಿಯರು ಆಚರಿಸಿಕೊಂಡು ಬಂದ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಯಕ್ಷಗಾನ ಮಂಡಳಿಯ ಸಂಚಾಲಕ ನಿತ್ಯಾನಂದ ನಾವರ ಅವರು ಮಾತಾಡಿ ನಮ್ಮ ಹಿರಿಯರು ಆಟಿ ತಿಂಗಳಲ್ಲಿ ಯಾವ ಬಗೆಯ ತಿಂಡಿಗಳನ್ನು ಸೇವಿಸುತ್ತಿದ್ದರು ಅನ್ನುವುದನ್ನು ಈ ಕಾರ್ಯಕ್ರಮದ ಮುಖಾಂತರ ಯುವಪೀಳಿಗೆಗೆ ಪರಿಚಯಿಸಲಾಯಿತು. ಹಾಗೂ ನಮ್ಮಲ್ಲಿ ಯಾವುದೇ ರೀತಿಯ ಕೀಳರಿಮೆ ಇಲ್ಲದೆ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಮಿತಿಯ ಅಧ್ಯಕ್ಷ ವಸಂತ ಪೂಜಾರಿ ಅವರು ನಿಮ್ಮೆಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ. ಮುಂದುಕ್ಕೂ ನಿಮ್ಮೆಲ್ಲರ ಸಹಕಾರ ಇದೆ ರೀತಿ ಇರಲಿ ಎಂದು ಆಶಿಸಿದರು. ಒಟ್ಟು 32 ಬಗೆಯ ತಿಂಡಿ ಎಲ್ಲಾರ ಗಮನ ಸೆಳೆಯಿತು. ಮಕ್ಕಳು ಹಾಗೂ ಸಮಿತಿಯ ಸದಸ್ಯರಿಂದ ವಿವಿಧ ರೀತಿಯ ಮನರಂಜನಾ ಕಾರ್ಯಕ್ರಮವು ನಡೆಯಿತು.
ಸಾವ್ಯ ಗ್ರಾಮದ ಉದ್ಯಮಿ ದಿನೇಶ್ ಕೋಟ್ಯಾನ್, ನಾರಾವಿಯ ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್ ನ ನಿರ್ದೇಶಕಿ ಯಶೋಧ ನಿತ್ಯಾನಂದ, ಸುಲ್ಕೇರಿಯ ಮಹಿಳಾ ಬಿಲ್ಲವ ವೇದಿಕೆಯ ಮಾಜಿ ಅಧ್ಯಕ್ಷೆ ಪ್ರೇಮ ಲೋಕಯ್ಯ ಪೂಜಾರಿ, ಸುಲ್ಕೇರಿ ಗ್ರಾಮ ಪಂಚಾಯತಿನ ಸದಸ್ಯ ನಾರಾಯಣ ಪೂಜಾರಿ ಪರಾರಿ, ಸಮಿತಿಯ ನಿಕಟಪೂರ್ವ ಅಧ್ಯಕ್ಷ ಕೊರಗಪ್ಪ ಪೂಜಾರಿ, ಬರ್ಕೆಮನೆತನದ ಗುರಿಕಾರ ನಾರಾಯಣ ಪೂಜಾರಿ, ರಾಜುಪೂಜಾರಿ, ಸುದೀಪ್ ಪೂಜಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಲ್ಕೇರಿ ಒಕ್ಕೂಟದ ಅಧ್ಯಕ್ಷ ಯಶೋಧರ ಪೂಜಾರಿ ಹಾಗೂ ಸಮಿತಿಯ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು. ನಿಕಟಪೂರ್ವ ಕಾರ್ಯದರ್ಶಿ ಡೀಕಯ್ಯ ಪೂಜಾರಿ ಸ್ವಾಗತಿಸಿದರು. ಮಲ್ಲಿಕಾ ಅವರು ಕಾರ್ಯಕ್ರಮ ನಿರೂಪಿಸಿದರು. ವಸಂತಿಯವರು ಧನ್ಯವಾದವಿತ್ತರು.