ಮುಂಡಾಜೆ: ಚಾಮುಂಡಿ ನಗರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲಾಯಿತು. ಶಾಲಾ ಎಸ್.ಡಿ.ಎಮ್.ಸಿ. ಸದಸ್ಯರು ಹಾಗೂ ಹಳೆ ವಿದ್ಯಾರ್ಥಿಗಳ
ಸಂಘದಿಂದ ನಿರ್ಮಾಣವಾದ ನೂತನ ಧ್ವಜ ಕಟ್ಟೆಯನ್ನು ಜಯಪ್ರಕಾಶ್ ಭಟ್ ಕಜೆ ಉದ್ಘಾಟಿದರು. ನಾರಾಯಣ ಗೌಡ ದೇವಸ್ಯ, ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಧ್ವಜಾರೋಹಣ ಮಾಡಿದರು. ಮುಖ್ಯ ಅತಿಥಿಗಳಾಗಿ ಬಾಬು ಪೂಜಾರಿ ಕೂಳೂರು ಉಪಸ್ಥಿತರಿದ್ದರು.
ಸರಿ ಸುಮಾರು 30 ವರ್ಷಗಳಿಂದ ಶಾಲೆಯಲ್ಲಿ ಅಡುಗೆ ಮಾಡಿಕೊಂಡು ಬಂದಿರುವ ರುಕ್ಮಿಣಿ (ಅಡುಗೆದ ಅಕ್ಕಾ ಎಂದೇ ಚಿರಪರಿಚಿತರಾಗಿರುವ) ಅವರನ್ನು ಶಾಲಾ ಹಳೆ ವಿದ್ಯಾರ್ಥಿಗಳ ಸಂಘದಿಂದ ಸನ್ಮಾನ ಮಾಡಲಾಯಿತು.
ಹಾಗೆಯೇ ಸ್ಥಳೀಯ ದಾನಿಗಳು ಆಗಿರುವ ಈಶ್ವರ ಚಾಮುಂಡಿನಗರ ಮತ್ತು ಶಾಲಾ ಹಳೆ ವಿದ್ಯಾರ್ಥಿ ಆಗಿರುವ ಅಮಿತ್ ಅವರು ಸೇರಿ ಮಕ್ಕಳಿಗೆ ಪುಸ್ತಕಗಳನ್ನು ಉಚಿತವಾಗಿ ನೀಡಿದರು. ಶಾಲೆಗೆ ಶಾಲಾ ಹಳೆ ವಿದ್ಯಾರ್ಥಿಗಳ ಸಂಘದಿಂದ ಮೀಕ್ಸರ್ ಗ್ರೈಂಡರ್ ನ್ನು ಕೊಡುಗೆಯಾಗಿ ನೀಡಲಾಯಿತು. ಮುಖ್ಯ ಶಿಕ್ಷಕಿ ರೇಖಾ ಕುಂದರ್ ಅವರು ಅತಿಥಿಗಳನ್ನು ಸ್ವಾಗತಿಸಿದರು ಮತ್ತು ಕಾರ್ಯಕ್ರಮವನ್ನು ನಿರೂಪಿಸಿದರು.