Site icon Suddi Belthangady

ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದಿಂದ ಸಹಾಯಧನ ವಿತರಣಾ ಕಾರ್ಯಕ್ರಮ

ಬೆಳ್ತಂಗಡಿ: ತಾಲೂಕು ನಡ ಗ್ರಾಮದ ಮಣ್ಣಿನ ಹರಕೆ ಖ್ಯಾತಿಯ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ವತಿಯಿಂದ ದೇವಸ್ಥಾನದ ಅನಂತರತ್ನ ಸಭಾಭವನದಲ್ಲಿ ನಡ ಗ್ರಾಮದ 8 ಅಂಗನವಾಡಿ ಕೇಂದ್ರಗಳ 136 ಹಾಗೂ ಸ್ಥಳೀಯ ಶಾಲೆಯ 71 ಒಟ್ಟು 207 ಮಕ್ಕಳಿಗೆ ಸಮವಸ್ತ್ರ ವಿತರಣೆ ಹಾಗೂ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮತ್ತು 7 ಜನರಿಗೆ ವೈದ್ಯಕೀಯ ಸಹಾಯಧನ ಹಾಗೂ 4 ವಿಶೇಷ ಚೇತನರಿಗೆ ಸಹಾಯಧನ ವಿತರಣಾ ಕಾರ್ಯಕ್ರಮ ಆ. 16ರಂದು ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ. ಸತೀಶ್ಚಂದ್ರ ಸುರ್ಯ ಗುತ್ತು ಸಮವಸ್ತ್ರ ಹಾಗೂ ಪ್ರೋತ್ಸಾಹಧನ ವಿತರಿಸಿದರು. ಕಾರ್ಯಕ್ರಮದಲ್ಲಿ ಸಂದೀಪಾ ಸತೀಶ್ಚಂದ್ರ, ಧಾರಿಣಿ ಎಸ್. ಜೈನ್ ಶ್ರೀ ಸಂಗ್ರಾಮ್ ಸುರ್ಯಗುತ್ತು, ದೇವಸ್ಥಾನದ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ. ರಾಜಶೇಖರ ಅಜ್ರಿ, ಬಿ.ಮುನಿರಾಜ ಅಜ್ರಿ, ಅಜಿತ್ ಆರಿಗ, ಸಂಪತ್ ಕುಮಾರ್, ನಡ ಗ್ರಾ. ಪಂ. ಸದಸ್ಯರಾದ ಸುಮಿತ್ರಾ, ಶಾಲಾ ಮುಖ್ಯ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

Exit mobile version