ಬೆಳ್ತಂಗಡಿ: ಪ್ರತಿಷ್ಠಿತ ಮುಗ್ಗ ಗುತ್ತುವಿನಲ್ಲಿ ಸಂಕ್ರಾಂತಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಮುಗ್ಗ ಗುತ್ತಿನ ಆಡಳಿತ ಮೋಕ್ತೆಸರ ನಿವೃತ್ತ ಎಸ್. ಪಿ. ಪೀತಾಂಬರ ಹೇರಾಜೆಯವರ 75 ವರ್ಷದ ಜನ್ಮ ದಿನಾಚರಣೆಯನ್ನು ಸನ್ನಿಧಿಯಲ್ಲಿರುವ ದೈವದೇವರ ಮತ್ತು ದುರ್ಗಾಂಬಿಕಾ ದೇವಿಯ ಮಹಾ ಪೂಜೆಯೊಂದಿಗೆ ಆಚರಿಸಲಾಯಿತು. ಆಡಳಿತ ಸಮಿತಿಯ ಸದಸ್ಯೆ ಹೇಮಾ ದಾಮೋದರ ನಿಸರ್ಗ, ಸಹೋದರಿಯರು ಮತ್ತು ಮಕ್ಕಳು, ಹೇರಾಜೆ ಕುಟುಂಬದ ಜಯರಾಮ ಬಂಗೇರ, ಜಾನಕಿ ಕೇಶವ್ ಕುಂಬರಬೈಲ್, ಉಮೇಶ್ ಬಂಗೇರ, ಸಂಗೀತ ಲೋಲಾಕ್ಷಿ, ಸುಜಾತ ವಿಮಲಾ, ರಕ್ಷಿತ್ ಶಿವರಾಮ್, ವಸಂತ ಅಂಚನ್, ಸಂತೋಷ್ ಕುಮಾರ್ ಹೇರಾಜೆ ಭಾಗಿಯಾಗಿದ್ದು ಪ್ರಶಾಂತ ಶಾಂತಿ ದಿನೇಶ್ ಪಿದಮ್ಮಲೆ, ಪ್ರಶಾಂತ್ ಪೂಜಾರಿ, ಕೀರ್ತಿ ಬಂಗೇರ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ಮುಗ್ಗ ಗುತ್ತುವಿನಲ್ಲಿ ಪೀತಾಂಬರ ಹೇರಾಜೆಯವರ 75ನೇ ಹುಟ್ಟುಹಬ್ಬ ಆಚರಣೆ
