ಶಿಶಿಲ: ಆ. 16ರಂದು ಸುರಿದ ಭಾರಿ ಗಾಳಿ ಮಳೆಗೆ ಶಿಶಿಲೇಶ್ವರ ದೇವಳದ ಅವರಣಕ್ಕೆ ನೀರು ನುಗ್ಗಿದೆ. ದೇವಳದ ಆವರಣ ತುಂಬಾ ಕೆಸರು ತುಂಬಿದೆ. ತಡೆ ಗೋಡೆ ಕುಸಿತಗೊಂಡ ಮೇಲೆ ಪದೇ ಪದೇ ದೇವಳದ ಆವರಣಕ್ಕೆ ನೀರು ಬರುತ್ತಿದೆ ಎಂದು ಪಂಚಾಯತ್ ಅಧ್ಯಕ್ಷ ಸುಧೀನ್ ತಿಳಿಸಿದ್ದಾರೆ.
ಕೊಂಬಾರು ನೀಲಮ್ಮ ಮನೆಗೆ ಹಾನಿ: ಗ್ರಾಮದ ಕೊಂಬಾರು ನಿವಾಸಿ ನೀಲಮ್ಮ ಮನೆಗೆ ಸುರಿದ ಭಾರಿ ಗಾಳಿ ಮಳೆಯಿಂದ ಮನೆಯ ಹಿಂಬದಿ ಗೋಡೆ ಮತ್ತು ಕೊಟ್ಟಿಗೆ ಸಂಪೂರ್ಣ ಕುಸಿದು ಅಪಾರ ನಷ್ಟ ಆಗಿದೆ ಎಂದು ಪಂಚಾಯತ್ ಅಧ್ಯಕ್ಷರು ತಿಳಿಸಿದ್ದಾರೆ.