ಉಜಿರೆ: ಕಿರಿಯಾಡಿ ಶ್ರೀ ಉಮಾ ಮಹೇಶ್ವರ ಭಜನಾ ಮಂಡಳಿ ಇದರ ಆಶ್ರಯದಲ್ಲಿ ಕಿರಿಯಾಡಿ ಶ್ರೀ ಸದಾಶಿವ ದೇವಸ್ಥಾನದ ವಠಾರದಲ್ಲಿ 35ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಆ. 17ರಂದು
ಬೆಳಿಗ್ಗೆ ಶ್ರೀ ಸದಾಶಿವ ದೇವರಿಗೆ ವಿಶೇಷ ಪೂಜೆ ಬಳಿಕ ದೇವಸ್ಥಾನದ ಅರ್ಚಕ ಕೃಷ್ಣ ಮೂರ್ತಿ ಹೊಳ್ಳರಿಂದ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಭಜನಾ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಭಕ್ತರು, ಸ್ಪರ್ಧಿಗಳು ಉಪಸ್ಥಿತರಿದ್ದರು. ಮಕ್ಕಳಿಗೆ, ಸಾರ್ವಜನಿಕ ಪುರುಷರಿಗೆ, ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆ, 1ರಿಂದ 5 ವರ್ಷದ ಒಳಗಿನ ಮಕ್ಕಳಿಗೆ ಮುದ್ದು ಕೃಷ್ಣ ಸ್ಪರ್ಧೆ,
ವಿದ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆ, ಪುರುಷರಿಗೆ ಮಲ್ಲ ಕಂಬ ಸ್ಪರ್ಧೆ, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ,ಹೂಮಾಲೆ ಕಟ್ಟುವ ಸ್ಪರ್ಧೆ ಮೊದಲಾದ ಸ್ಪರ್ಧೆಗಳು ನಡೆಯಿತು.
ಸಂಜೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಜನಾ ಮಂಡಳಿ ಅಧ್ಯಕ್ಷ ಗಿರೀಶ್ ವಹಿಸಲಿದ್ದಾರೆ. ಚಾರ್ಮಾಡಿ ಸ. ಹಿ. ಪ್ರಾ. ಶಾಲಾ ಸಹ ಶಿಕ್ಷಕಿ ಸೀತಮ್ಮದೇವಿದಾಸ್ ಮಾಲ್ಡಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಪಡೆದ ತುಷಾರರಿಗೆ ಸನ್ಮಾನ ನಡೆಯಲಿದೆ.