ಉಜಿರೆ: ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವ ಆಚರಣೆ ಉಜಿರೆ ಕೆ.ಎಸ್.ಆರ್.ಟಿ.ಸಿ. ಬಸ್ ಸ್ಟ್ಯಾಂಡ್ ನಲ್ಲಿ ನಡೆಯಿತು.
ಧ್ವಜಾರೋಹಣವನ್ನು ಸಂಘದ ಗೌರವಾಧ್ಯಕ್ಷ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ
ಮೋಕ್ತೆಸರ ಶರತ್‌ಕೃಷ್ಣ ಪಡುವೆಟ್ನಾಯ ನೆರವೇರಿಸಿದರು. ಅಧ್ಯಕ್ಷತೆಯನ್ನು ವರ್ತಕರ ಸಂಘದ ಕಾರ್ಯದರ್ಶಿ ಇಂಡಿಯನ್ ಡ್ರೆಸ್ ಲಕ್ಷ್ಮಣ್ ಗೌಡ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಸೈನಿಕ ಎ.ಕೆ. ಶಿವನ್, ಉಜಿರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿಕುಮಾರ್ ಬರೆಮೇಲು, ಉಜಿರೆ ಹೋಟೆಲ್ ಗಣೇಶ್ ಭವನದ ಜ್ಯೋತಿ ಪ್ರಭಾತ್ ಭಟ್ ಭಾಗವಹಿಸಿದ್ದರು.
ಕಾರ್ಯಕ್ರಮದ ಮೊದಲು ಉಜಿರೆ ದೇವಸ್ಥಾನದಿಂದ ಬಸ್ ನಿಲ್ದಾನದ ವರೆಗೆ ಮೆರವಣಿಗೆ ನಡೆಯಿತು. ವರ್ತಕರು, ಗ್ರಾಮಸ್ಥರು ಹಾಜರಿದ್ದರು. ಸಂಘದ ಕೋಶಾಧಿಕಾರಿ ಅಬೂಬಕ್ಕರ್ ಸ್ವಾಗತಿಸಿ, ಜತೆ ಕಾರ್ಯದರ್ಶಿ ಪ್ರಸಾದ್ ಬಿ. ಎಸ್. ವಂದಿಸಿದರು.