Site icon Suddi Belthangady

ಧರ್ಮಸ್ಥಳದಲ್ಲಿ ಬಿಜೆಪಿಯ ನಿಯೋಗ-ಕ್ಷೇತ್ರಕ್ಕೆ ಅಪಪ್ರಚಾರ ಆದರೆ ಸಹಿಸಲ್ಲ-ಮುಸುಕುಧಾರಿಯ ತನಿಖೆಯಾಗಬೇಕು-ವಿಜಯೇಂದ್ರ ಆಗ್ರಹ


ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಯುತ್ತಿದೆ, ಹಿಂದೂಗಳ ಭಾವನೆಗೆ ಧಕ್ಕೆಯುಂಟಾಗಿರುವುದನ್ನು ವಿರೋಧಿಸಿ ಇಂದು ಬಿಜೆಪಿ ನಿಯೋಗ ಧರ್ಮಸ್ಥಳಕ್ಕೆ ಭೇಟಿ ನೀಡಿದೆ.

ದೇವರ ದರ್ಶನ ಪಡೆದು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ “ಕ್ಷೇತ್ರದ ವಿರುದ್ಧ ಅಪಪ್ರಚಾರವನ್ನು ನಾವು ಸಹಿಸುವುದಿಲ್ಲ. ಎಸ್ ಐ ಟಿ ತನಿಖೆ ನಡೆಯಲಿ,ಅದರ ಜೊತೆ ಮುಸುಕುಧಾರಿಯನ್ನು ತನಿಖೆಗೆ ಒಳಪಡಿಸಬೇಕು.ದಿನೇಶ್ ಗುಂಡೂರಾವ್, ಡಿಕೆಶಿಯೇ ಕ್ಷೇತ್ರದ ವಿರುದ್ಧ ಷಡ್ಯಂತ್ರ ಅಂತ ಹೇಳಿದ್ದಾರೆ. ಸಿದ್ಧರಾಮಯ್ಯರವರು ಕೂಡಲೇ ತನಿಖೆಗೆ ಆಗ್ರಹಿಸಬೇಕು ಎಂದು ಹೇಳಿದರು.

ತದಬಳಿಕ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರನ್ನು ನಿಯೋಗ ಭೇಟಿಯಾಯಿತು. ಭೇಟಿಯ ನಂತರ ಮಾತನಾಡಿದ ಸಿ ಟಿ ರವಿ ” ಧರ್ಮಾಧಿಕಾರಿಗಳು ನಿರಾಳವಾಗಿದ್ದಾರೆ. ಅವರು ತನಿಖೆ ನಡೆಸಲಿ. ಆದರೆ ಭಕ್ತರ ಭಾವನೆಗೆ ಧಕ್ಕೆ ಬರುವಂತೆ ಮಾಡಿರುವ ಬಗ್ಗೆ ಅವರ ನೋವು ತಿಳಿಸಿದ್ದಾರೆ”ಎಂದರು.

ಬಿಜೆಪಿ ನಿಯೋಗ ಧರ್ಮಸ್ಥಳದಲ್ಲಿ ಧರ್ಮವಿದೆ,ಸತ್ಯವಿದೆ ಅದರೊಂದಿಗೆ ನಾವಿದ್ದೇವೆಂದು ತಿಳಿಸಿದರು. ಸುದ್ದಿ ನ್ಯೂಸ್ ನಲ್ಲಿ ನೇರಪ್ರಸಾರ ನಡೆಸಲಾಯಿತು. ಬಿಜೆಪಿ ನಿಯೋಗ ಭೇಟಿಯಾಗಿ ವಾಪಾಸಾಯಿತು.

Exit mobile version