ನಾರಾವಿ: 800 ವರ್ಷ ಮೇಲ್ಪಟ್ಟು ಇತಿಹಾಸವಿರುವ ನಾರಾವಿಯ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಸಿಂಹ ಸಂಕ್ರಮಣದ ಪ್ರಯುಕ್ತ ಮಹಾಪೂಜೆಯು ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಆ.16ರಂದು ನಡೆಯಿತು.
ಅನಾದಿಕಾಲದಿಂದಲೂ ಭಜನೆಯಿಂದಲೇ ದೇವರನ್ನು ಒಲಿಸಿಕೊಂಡು ಬಂದ ಈ ಕ್ಷೇತ್ರದಲ್ಲಿ ನಡೆದ ಮಹಾಪೂಜೆಗೆ ಸರಿಸುಮಾರು 15 ಸಾವಿರಕ್ಕೂ ಹೆಚ್ಚು ಭಕ್ತರು ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾದರು. ಬೆಳಿಗ್ಗೆ 6.30 ಗಂಟೆಗೆ ಪ್ರಾರಂಭವಾದ ಪೂಜಾ ಕಾರ್ಯಕ್ರಮವು ರಾತ್ರಿ 9 ಗಂಟೆಯವರೆಗೆ ನಡೆಯತ್ತಿದ್ದು, ಮಧ್ಯಾಹ್ನದ ಅನ್ನಸಂತರ್ಪಣೆಯ ವೇಳೆ 5 ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ಭಾಗಿಯಾಗಿ ದೇವರ ಪ್ರಸಾದ ಸ್ವೀಕರಿಸಿದರು.
ಇಂದು ನಡೆದ ಮಹಾಪೂಜೆಯ ಅನ್ನಸಂತರ್ಪಣೆಗೆ ದಾನಿಗಳಾದ ವಿವೇಕ್ ಅರ್ಥ್ ಮೂವರ್ಸ್ ನಾರಾವಿಯ ವಿನಯ ಹೆಗ್ಡೆ, ನಾರಾವಿ ಶ್ರೀ ಸಾಯಿನಿಧಿ ಟೆಕ್ಸ್ ಟೈಲ್ ನ ರಮೇಶ್ ಸುವರ್ಣ, ಗುರುವಾಯನಕೆರೆಯ ಎಕ್ಸೆಲ್ ವಿದ್ಯಾಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಪುತ್ತೂರಿನ ಬೃಂದಾವನದ ಅನುರಾಧ ಶೆಣೈ, ನಾರಾವಿಯ ಸನ್ನಿಧಿ ಪ್ಯಾಲೇಸ್ ಡೊಂಕುಬೆಟ್ಟುವಿನ ವೀರಮ್ಮ ಸಂಜೀವ ಪೂಜಾರಿ ಹಾಗೂ ನಾರಾವಿಯ ಸನ್ಮಿತ್ರ, ಪಲಾಯಿಬೆಟ್ಟುವಿನ ಸನ್ಮತ್ ಕುಮಾರ್ ಅವರು ಸಹಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು.
ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರವೀಂದ್ರ ಪೂಜಾರಿ ಬಾಂದೊಟ್ಟು, ಸದಸ್ಯರಾದ ಶ್ರೀನಿವಾಸ ಕಿಣಿ, ದಿವಾಕರ ಭಂಡಾರಿ, ಜಗದೀಶ್ ಹೆಗ್ಡೆ, ಲಕ್ಷö್ಮಣ, ಶಂಕರ, ಯಶೋಧಾ, ರಶ್ಮಿ , ಶ್ರೀ ಸೂರ್ಯನಾರಾಯಣ ಭಜನಾ ಮಂಡಳಿಯ ಅಧ್ಯಕ್ಷ ನಾರಾಯಣ ಪೂಜಾರಿ, ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಪ್ರಗತಿಪರ ಕೃಷಿಕ ಗಂಗಾಧರ ಮಿತ್ತಮಾರು, ರಾಮಚಂದ್ರ ಭಟ್ ಕುಕ್ಕುಜೆ, ಭಜನಾ ಮಂಡಳಿಯ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.