Site icon Suddi Belthangady

ಬೆಳ್ತಂಗಡಿ: ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

ಬೆಳ್ತಂಗಡಿ: 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬೆಳ್ತಂಗಡಿ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಕಚೇರಿಯ ಆವರಣದಲ್ಲಿ ವಲಯ ಅರಣ್ಯ ಅಧಿಕಾರಿ ತ್ಯಾಗರಾಜು ಟಿ. ಎನ್. ಅವರು ಧ್ವಜಾರೋಹಣವನ್ನು ನೆರವೇರಿಸಿ, ಸ್ವಾತಂತ್ರ್ಯ ಹೋರಾಟಗಾರರ ಬಲಿದಾನವನ್ನು ಸ್ಮರಿಸಿಕೊಂಡು, ಹಿರಿಯರ ತ್ಯಾಗ ಬಲಿದಾನ ವ್ಯರ್ಥವಾಗದಂತೆ ಇಲಾಖಾ ಕರ್ತವ್ಯ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸುವಂತೆ ಕರೆ ನೀಡಿ ಶುಭ ಸಂದೇಶ ನೀಡಿದರು.

ಉಪ ವಲಯ ಅರಣ್ಯ ಅಧಿಕಾರಿಗಳಾದ ಸಂತೋಷ್, ರಾಘವೇಂದ್ರ , ಸಂದೀಪ್, ರಂಜಿತ್, ಕಿರಣ್ ಪಾಟೀಲ್, ನಾಗೇಶ್, ಕಮಲ, ರವಿಚಂದ್ರ, ಗಸ್ತು ಅರಣ್ಯ ಪಾಲಕರಾದ ಪರಶುರಾಮ್, ಪ್ರತಾಪ್, ರವಿಕುಮಾರ್, ರವಿ ಜಟ್ಟಿ ಮುಕ್ರಿ, ಸಂತೋಷ್ ಹಾಗೂ ಇತರ ಸಿಬ್ಬಂದಿಗಳೊಂದಿಗೆ, ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Exit mobile version