ಬೆಳ್ತಂಗಡಿ: ಧರ್ಮಸ್ಥಳ ಗ್ರಾ. ಪಂ. ಮಾಜಿ ಅಧ್ಯಕ್ಷ ಕೇಶವ ಗೌಡರವರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಕುರಿತು ಹಾಗೂ ಇತರ ಎಸ್.ಐ.ಟಿ ತನಿಖೆ ಕುರಿತು ಸಾಮಾಜಿಕ ಹೋರಾಟಗಾರ ಜಯಂತ್ ಟಿ. ಆ.16ರಂದು ಮಾಧ್ಯಮಕ್ಕೆ ಹೇಳಿಕೆ ಕೊಟ್ಟಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆ ಎಸ್.ಐ.ಟಿ. ಕಚೇರಿಗೆ ಬಂದ ಜಯಂತ್ ಟಿ ಧರ್ಮಸ್ಥಳ ವ್ಯಾಪ್ತಿಯಲ್ಲಿ ನಡೆದ ಅನುಮಾನಾಸ್ಪದ ಕೊಲೆ ಕುರಿತಂತೆ ನಾನು ಕೊಟ್ಟ ದೂರಿನ ಬಗ್ಗೆ ಕೂಲಂಕುಶವಾಗಿ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಬೇಕು. ನನ್ನ ದೂರಿನಲ್ಲಿ ಸತ್ಯಾಂಶ ಇಲ್ಲದೇ ಹೋದರೆ ನನ್ನ ಮೇಲೆ ಕ್ರಮ ಕೈಗೊಳ್ಳಲಿ ಹಾಗೂ ಧರ್ಮಸ್ಥಳ ಗ್ರಾ. ಪಂ. ಮಾಜಿ ಅಧ್ಯಕ್ಷ ಕೇಶವ ಗೌಡರವರರು ನನ್ನ ಸಾಕ್ಷಿದಾರರ ಮೇಲೆ ಬೆದರಿಕೆ ಒಡ್ಡಿ ಹಲ್ಲೆ ನಡೆಸಿದ್ದಾರೆ.
2010ರ ಎ. 6ರಂದು ಧರ್ಮಸ್ಥಳ ಗ್ರಾಮದ ವಸತಿ ಗ್ರಹದಲ್ಲಿ 35-40 ವರ್ಷದ ಆಸುಪಾಸಿನ ಮಹಿಳೆಯ ಕೊಲೆಯ ಪ್ರಕರಣದ ಕುರಿತು ಸಮಗ್ರ ತನಿಖೆಯಾಗಬೇಕು. ಆ ಪ್ರಕರಣದಲ್ಲಿ ಸಾಕ್ಷಿ ನಾಶ ಮಾಡಿದ್ದಾರೆ. 150-160 ಅಸಹಜ ಸಾವಾಗಿರುವ ಕುರಿತು ಮಾಹಿತಿ ಲಭ್ಯವಾಗಿದ್ದು ತ್ವರಿತಗತಿಯಲ್ಲಿ ತನಿಖೆ ಆಗಬೇಕೆಂದು ಜಯಂತ್ ಟಿ. ಅವರು ಮಾಧ್ಯಮಗಳ ಮುಂದೆ ಒತ್ತಾಯಿಸಿದರು.