ಪೆರಿಂಜೆ: ಕರ್ನಾಟಕ ಗಮಕ ಕಲಾ ಪರಿಷತ್ತು ವತಿಯಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢ ಶಾಲೆಯಲ್ಲಿ ಗಮಕವಾಚನ ಕಾರ್ಯಕ್ರಮ ನಡೆಯಿತು. ದ.ಕ.ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಪ್ರೊ. ಮಧೂರು ಮೋಹನ ಕಲ್ಲೂರಾಯ ಹಾಗೂ ಸಂಗೀತ ಶಿಕ್ಷಕ ಎ. ಡಿ. ಸುರೇಶ್ ಕಾರ್ಯಕ್ರಮ ನಡೆಸಿಕೊಟ್ಟರು.
ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ ಕಲ್ಲೂರಾಯರು ವಿದ್ಯಾರ್ಥಿಗಳಿಗೆ ಗಮಕದ ಪರಿಚಯ ಮಾಡಿಕೊಡುವುದರೊಂದಿಗೆ ವಿದ್ಯಾರ್ಥಿಗಳಿಗೆ ಪಠ್ಯಭಾಗದಲ್ಲಿ ಬರುವ ಕುಮಾರವ್ಯಾಸ ಭಾರತ ಹಾಗೂ ರನ್ನನ ಗಧಾ ಯುದ್ಧದ ಕೆಲವು ಕಾವ್ಯಭಾಗವನ್ನು ವ್ಯಾಖ್ಯಾನ ಮಾಡಿದರು. ಸುರೇಶ್ ಅವರು ಕಾವ್ಯ ವಾಚನ ಮಾಡಿದರು. ಮುಖ್ಯೋಪಾಧ್ಯಾ ಯರಾದ ಮುಕುಂದಚಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಕನ್ನಡ ಭಾಷಾ ಶಿಕ್ಷಕಿ ಜಯಂತಿ ಕಾರ್ಯಕ್ರಮ ಆಯೋಜಿಸಿದ್ದರು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.