Site icon Suddi Belthangady

ಪಟ್ರಮೆ: ಕೂಟೇಲು-ಸಂಕೇಶ-ಮಣಿಯೇರು ಪಂಚಾಯತ್‌ ರಸ್ತೆಯ ಕಿರು ಸೇತುವೆ ಕುಸಿತ: ದುರಸ್ತಿಗೊಳಿಸುವಂತೆ ಸ್ಥಳೀಯರ ಒತ್ತಾಯ

ಪಟ್ರಮೆ: ಪಟ್ರಮೆಯ ಕೂಟೇಲು – ಸಂಕೇಶ -ಮಣಿಯೇರು ಸಂಪರ್ಕದ ಪರಿಶಿಷ್ಟ ಜಾತಿ ಕಾಲೊನಿಯ ಪಂಚಾಯತ್‌ ರಸ್ತೆಯ ಕಿರು ಸೇತುವೆ ಆ. 15ರಂದು ಸುರಿದ ಮಳೆಯ ಅಬ್ಬರಕ್ಕೆ ಕುಸಿಯಲಾರಂಭಿಸಿದೆ. ಇದರಲ್ಲಿ ಸಂಚರಿಸುವುದು ಅಪಾಯಕಾರಿಯಾಗಿದೆ.

ಸೇತುವೆಯು ಪಟ್ರಮೆ ಮುಖ್ಯ ರಸ್ತೆಯ ಪ್ರಾರಂಭದಲ್ಲೇ ನೂರು ಮೀಟ‌ರ್ ಅಂತರದಲ್ಲಿ ಇರುವುದಾಗಿದ್ದು, ಎಲ್ಲಾ ಬಳಕೆದಾರರ ಮನೆಗಳೂ ಹತ್ತಿರದಲ್ಲಿಯೇ ಇರುವುದಾಗಿದ್ದು, ಅಷ್ಟೂ ಮನೆಯವರು ಸಂಕಷ್ಟಗೊಳಗಾಗಿದ್ದಾರೆ.

ಕಳೆದ ಹಲವು ವರ್ಷಗಳಿಂದ ಶ್ಯಾಮ್ ರಾಜ್ ಸಹಿತ ಬಹಳಷ್ಟು ಮಂದಿ ಈ ರಸ್ತೆ ಅಭಿವೃದ್ಧಿ ಮಾಡಿಕೊಡುವಂತೆ ಮನವಿ ಮಾಡಿದ್ದರು. ಕೂಡಲೇ ಸಂಬಂಧಪಟ್ಟ ಇಲಾಖೆ ಈ ಕಡೆ ಗಮನಹರಿಸಿದರೆ ಮುಂದೆ ನಡೆಯುವ ಅನಾಹುತವನ್ನು ತಪ್ಪಿಸಬಹುದು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Exit mobile version