Site icon Suddi Belthangady

ಕಳೆಂಜದಲ್ಲಿ ಕ್ರಿಶ್ಚಿಯನ್ ಬ್ರದರ್ಸ್ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವ

ಕಳೆಂಜ: ಕ್ರಿಶ್ಚಿಯನ್ ಬ್ರದರ್ಸ್ ವತಿಯಿಂದ ಭಾರತದ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆ.15ರಂದು ಬೆಳಿಗ್ಗೆ 8.45ಕ್ಕೆ ಕ್ರಿಶ್ಚಿಯನ್ ಬ್ರದರ್ಸ್ ಕಚೇರಿ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಭಾವಪೂರ್ಣವಾಗಿ ನಡೆಸಲಾಯಿತು.

ಮಾಜಿ ಸೈನಿಕ ತೋಮಸ್ ಪಿ.ಜೆ. ಅವರು ಧ್ವಜಾರೋಹಣ ನೆರವೇರಿಸಿ ದೇಶಭಕ್ತಿಯ ಮಹತ್ವವನ್ನು ನೆನಪಿಸಿದರು. ಕಾರ್ಯದರ್ಶಿ ಶಿಜೋ ಸ್ವಾಗತಿಸಿದರು. ಗೌರವಾಧ್ಯಕ್ಷರು ಸೆಬಾಸ್ಟಿಯನ್ ಪಿ.ಟಿ., ಗೌರವ ಸಲಹೆಗಾರರು ಜೋಸೆಫ್ ಕೆ.ಡಿ., ಉಪಾಧ್ಯಕ್ಷ ಮ್ಯಾಥ್ಯೂ ವಿ.ಟಿ., ಕೋಶಾಧಿಕಾರಿ ರಂಜಿತ್ ಪಿ.ಎಸ್. ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಧ್ವಜಾರೋಹಣದ ನಂತರ ರಾಷ್ಟ್ರಗೀತಿಯನ್ನು ಹಾಡಿ ಸ್ವಾತಂತ್ರ್ಯದ ಶ್ರದ್ಧಾಸ್ಪದ ಕ್ಷಣವನ್ನು ಸ್ಮರಿಸಲಾಯಿತು. ಸೈನಿಕರ ತ್ಯಾಗವನ್ನು ನೆನೆದು, ಯುವಪೀಳಿಗೆ ರಾಷ್ಟ್ರಾಭಿಮಾನ ಮತ್ತು ಸೇವಾ ಮನೋಭಾವವನ್ನು ಉಳಿಸಿಕೊಳ್ಳಬೇಕು ಎಂಬ ಸಂದೇಶವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷ ಅಗಸ್ಟೀನ್ ಟಿ.ಎ. ಧನ್ಯವಾದಗಳನ್ನು ಸಲ್ಲಿಸಿದರು.

Exit mobile version