Site icon Suddi Belthangady

ಕರಂಬಾರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವ

ಕರಂಬಾರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋವವು ಸಂಭ್ರಮದಿಂದ ಆಚರಿಸಲಾಯಿತು. ಈ ಶಾಲೆಗೆ ಧ್ವಜ ಸ್ತಂಭದ ಪೀಠವನ್ನು ಶಿರ್ಲಾಲು ಗ್ರಾಮದ ಶ್ರೀ ಗಂಧ ನಿವಾಸಿ ಜಯರಾಮ ಮತ್ತು ಮನೆಯವರು ಉಚಿತವಾಗಿ ನಿರ್ಮಿಸಿ ಕೊಟ್ಟಿದ್ದು ಇದನ್ನು ಶಿರ್ಲಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಎಂ. ಶೆಟ್ಟಿ ಉಧ್ಘಾಟಿಸಿ ಶುಭಾಶಯಗಳು ಕೋರಿದರು.

ಧ್ವಜಾರೋಹಣವನ್ನು ಶಾಲಾಭಿವೃದ್ಧಿಯ ಅಧ್ಯಕ್ಷ ಪುಷ್ಪರಾಜ್ ಎಂ. ಕೆ. ನೆರೆವೇರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಲೆಗೆ ಭೂಮಿಯನ್ನು ದಾನ ನೀಡಿರುವ ಮನೆತನದ ಹಿರಿಯರಾದ ಸೀತಾರಾಮ ಹೆಬ್ಬಾರ್, ಕರಂಬಾರು ಗ್ರಾಮದ ಪ್ರಗತಿ ಪರ ಕೃಷಿಕ ಪ್ರಶಸ್ತಿ ವಿಜೇತ ಶಿವಾನಂದ ಹೆಗ್ಡೆ ಪರ್ಲಾಂಡ, ವೇದಿಕೆಯಲ್ಲಿ ಸಮಿತಿಯ ಉಪಾದ್ಯಕ್ಷೆ ವಿಜಯ, ಮುಖ್ಯ ಶಿಕ್ಷಕ ರಮೇಶ್ ಛಾವಾಣ್, ಸದಸ್ಯರುಗಳಾದ ಹಜೀಮ್, ಸಂಗೀತಾ, ಅಂಗನವಾಡಿ ಶಿಕ್ಷಕಿ ಲಾವಣ್ಯ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದ ಯಶಸ್ವಿಗೆ ಶಾಲೆಯ ಶಿಕ್ಷಕಿಯ ಸಾವಿತ್ರಿ, ಲತಾ, ಚೈತ್ರಾ, ಸ್ವಾತಿ, ಬಿಸಿ ಊಟ ನೌಕರರಾದ ಜಯಂತಿ, ಚಂದ್ರಾವತಿ, ಸಹಕರಿಸಿದರು. ಹಳೆವಿದ್ಯಾರ್ಥಿಗಳು, ಮಕ್ಕಳ ಪೋಷಕರು, ಊರವರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮವನ್ನು ಶಾಲೆಯ ಶಿಕ್ಷಕ ಕಿರಣ್ ಕುಮಾರ್ ಕೆ.ಎಸ್. ಸ್ವಾಗತಿಸಿ ನಿರೂಪಿಸಿದರು. ಜ್ಞಾನ ದೀಪ ಶಿಕ್ಷಕ ಸದಾಶಿವ ಕರಂಬಾರು ವಂದಿಸಿದರು.

Exit mobile version