ಬೆಳ್ತಂಗಡಿ: ಆ. 13ರಂದು ನಡೆದ ಎಸ್.ಡಿ.ಎಂ ಕಾಲೇಜಿನ ಮೈದಾನದಲ್ಲಿ ನಡೆದ ವಲಯಮಟ್ಟದ ಥ್ರೋಬಾಲ್ ಪಂದ್ಯಾಟದಲ್ಲಿ ಸಂತ ತೆರೆಸಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಅತ್ಯುನ್ನತ ಸಾಧನೆ ಮಾಡಿ ಚರಿತ್ರೆ ನಿರ್ಮಿಸಿದ್ದಾರೆ.
ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಅವರು ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಈ ಜಯದಲ್ಲಿ ಸಂತ ತೆರೆಸಾ ಸಂಯುಕ್ತ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಸಿರಾಜ್ ಹಾಗೂ ವಿನ್ಸೆಂಟ್ ಅವರ ತ್ಯಾಗಭರಿತ ಮಾರ್ಗದರ್ಶನ ಮಹತ್ವದ ಪಾತ್ರವಹಿಸಿದೆ.
ಸಂಸ್ಥೆಯ ಪ್ರಾಂಶುಪಾಲೆ ಭಗಿನಿ ಜ್ಯೋತಿ ಮೋಲಿ ಡಿ ಕುನ್ಹ, ಸಂಚಾಲಕರು ಹಾಗೂ ಎಲ್ಲಾ ಉಪನ್ಯಾಸಕರು, ವಿದ್ಯಾರ್ಥಿಗಳ ಪರಿಶ್ರಮ, ತಂಡಸ್ಫೂರ್ತಿ ಹಾಗೂ ಶಿಸ್ತುಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.