ಬೆಳ್ತಂಗಡಿ: 79ನೇ ಭಾರತ ಸ್ವಾತಂತ್ರ್ಯೋತ್ಸವ ಅಂಗವಾಗಿ ಗೇರುಕಟ್ಟೆ ಮನುಷ್ಯರ್ ಅಕಾಡೆಮಿಯಲ್ಲಿನ ಮನುಷ್ಯರ್ ಪ್ಯಾರಾ ಮೆಡಿಕಲ್ ಕಾಲೇಜು, ಪಿಯು ಕಾಲೇಜು, ಇಂಗ್ಲೀಷ್ ಮೀಡಿಯಂ ಸ್ಕೂಲ್ ವಿದ್ಯಾರ್ಥಿಗಳಿಂದ ಸುಮಾರು 200 ಮೀಟರ್ ಉದ್ದದ ಭಾರತ ಧ್ವಜವನ್ನ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಡೆದ ಮೆರವಣಿಗೆಯಲ್ಲಿ ಪ್ರದರ್ಶಿಸಿ ದಾಖಲೆಯನ್ನು ಬರೆದರು.
ಬಹಳ ವಿಜೃಂಭಣೆಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕರು ಧ್ವಜಾರೋಹಣವನ್ನು ಮಾಡಿ, ಭಾರತ ನಮ್ಮ ಹೆಮ್ಮೆಯ ರಾಷ್ಟ್ರ , ದೇಶದ ಕಾನೂನುಗಳನ್ನ ಪಾಲಿಸಬೇಕು ವಿದ್ಯಾರ್ಥಿ ಜೀವನದಿಂದಲೇ ದೇಶಪ್ರೇಮವನ್ನು ರೂಪಿಸಿಕೊಳ್ಳಬೇಕೆಂಬುದಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಜನರಲ್ ಮ್ಯಾನೇಜರ್ ಹೈದರ್ ಮರ್ದಾಳ ಸ್ವಾಗತವನ್ನು ಮಾಡಿದರು. ಸಂಸ್ಥೆಯ ಟ್ರಸ್ಟಿ ಅಬ್ದುಲ್ ಖಾದರ್ ಹಾಜಿ, ಬೆಳ್ತಂಗಡಿ ಅಗ್ನಿಶಾಮಕ ದಳದ ಪೊಲೀಸ್ ಅಧಿಕಾರಿ ಉಸ್ಮಾನ್, ಕಾರ್ಯನಿರ್ವಹಣಾಧಿಕಾರಿ ರಶೀದ್ ಕುಪ್ಪೆಟ್ಟಿ, ಅರೇಬಿಕ್ ವಿಭಾಗದ ಮುಖ್ಯಸ್ಥರಾದ ಅಬ್ದುಲ್ಲ ಸಖಾಫಿ ನಿಂತಿಕಲ್ಲು ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಹಂಸ ಶ್ರೀ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಜಿನಾತ್ ಬಾನು, ಮುಖ್ಯೋಪಾಧ್ಯಾಯಿನಿ ಉಷಾ ಪಿ., ಪ್ಯಾರಾ ಮೆಡಿಕಲ್ ಉಪ ಪ್ರಾಂಶುಪಾಲೆ ಗೌತಮಿ ಶರಣ್, ಪಿ.ಯು ವಿಭಾಗದ ಉಪ ಪ್ರಾಂಶುಪಾಲ ಮೊಹಮ್ಮದ್ ತೌಫೀಕ್, ವಿದ್ಯಾರ್ಥಿಗಳ ಪೋಷಕರು, ಸ್ಥಳೀಯ ಜಮಾತಿನ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಯುವ ನಾಯಕರು ಮನ್ ಷ್ಯರ್ ಸಂಸ್ಥೆಗಳ ಶಿಕ್ಷಕರು ಮತ್ತು ಶಿಕ್ಷಕೇತರ ವೃಂದದವರು, ವಿದ್ಯಾರ್ಥಿಗಳು, ಮತ್ತು ಮನ್ಶರ್ ಹಿತೈಷಿಗಳು ಭಾಗಿಯಾಗಿದ್ದರು.
ಧ್ವಜ ಪ್ರದರ್ಶನದ ಜೊತೆಗೆ ವಿದ್ಯಾರ್ಥಿಗಳಿಂದ ನಿರ್ಮಿಸಿದ ಗೇಟ್ ಆಫ್ ಇಂಡಿಯಾದ ಮಾದರಿ ಮನಮೋಹಕವಾಗಿತ್ತು. ವಿದ್ಯಾರ್ಥಿಗಳಿಂದ ವಿವಿಧ ಮನರಂಜನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಶಿಕ್ಷಕಿ ನಿಶಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ರಶೀದ್ ಕುಪ್ಪಟ್ಟಿ ಅವರು ವಂದಿಸಿದರು.