Site icon Suddi Belthangady

ಬೆಳ್ತಂಗಡಿ: ಅಖಂಡ ಭಾರತ ಸಂಕಲ್ಪದಿನ ಕಾರ್ಯಕ್ರಮ

ಉಜಿರೆ: ವಿಶ್ವ ಹಿಂದೂ ಪರಿಷತ್ ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಬೆಳ್ತಂಗಡಿ ಪ್ರಖಂಡ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳ್ತಂಗಡಿ ತಾಲೂಕು ಇದರ
ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮವು ಆ.14ರಂದು ಉಜಿರೆ ಶಾರದಾ ಮಂಟಪದಲ್ಲಿ ಜರುಗಿತು.

ವಿಶ್ವಹಿಂದೂ ಪರಿಷದ್ ಬೆಳ್ತಂಗಡಿ ಪ್ರಖಂಡದ ಅಧ್ಯಕ್ಷ ವಿಷ್ಣು ಮರಾಠೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಭಜರಂಗದಳ ಪ್ರಾಂತ ಬಲೋ ಪಾಸಾನ ಪ್ರಮುಖ್, ಭಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತದ ನರೇಶ್ ರೆಡ್ಡಿ ದಿಕ್ಕೂಚಿ ಭಾಷಣವನ್ನು ನೆರವೇರಿಸಿದರು. ವೇದಿಕೆಯಲ್ಲಿ ನಿವೃತ್ತ ಯೋಧ ಗೋಪಾಲಕೃಷ್ಣ ಕಾ೦ಚೋಡು, ಉದ್ಯಮಿ ಪದ್ಮನಾಭ ಶೆಟ್ಟಿ ಉಜಿರೆ, ಪ್ರಸಾದ್ ಗೌಡ ಉಜಿರೆ ವಿಶ್ವಹಿಂದೂ ಪರಿಷದ್ ಉಪಾಧ್ಯಕ್ಷರು ಗ್ರಾಮ ಸಮಿತಿ ಉಜಿರೆ, ಗೌರವ್ ಉಜಿರೆ ಭಜರಂಗದಳ ಸಹ‌ ಸಂಯೋಜಕ್ ಬೆಳ್ತಂಗಡಿ ಪ್ರಖಂಡ ಉಪಸ್ಥಿತರಿದ್ದರು.

ಪುತ್ತೂರು ಜಿಲ್ಲಾ ಸಂಘ ಚಾಲಕ ವಿನಯ್,‌ ದಿನೇಶ್‌ ಚಾರ್ಮಾಡಿ ಭಜರಂಗದಳ ಸಹ ಸಂಯೋಜಕ್ ಪುತ್ತೂರು ಜಿಲ್ಲೆ, ವಿ.ಹಿಂ.ಪ. ಬೆಳ್ತಂಗಡಿ ಪ್ರಖಂಡ ಕಾರ್ಯದರ್ಶಿ ರಮೇಶ್‌ ಉಜಿರೆ‌ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ದೇಶ ಭಕ್ತರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಉಜಿರೆ ಶಾರದಾ ಮಂಟಪದಿಂದ ಉಜಿರೆ ಪೇಟೆಯ ವರೆಗೆ ಪಂಜಿನ ಮೆರವಣಿಗೆ ನಡೆಯಿತು. ಸಂತೋಷ ಅತ್ತಾಜೆ ಗೊರಕ್ಷಾ ಪ್ರಮುಖ್ ಬೆಳ್ತಂಗಡಿ ಪ್ರಖಂಡ ಸ್ವಾಗತಿಸಿದರು. ಮೋಹನ್ ಬೆಳ್ತಂಗಡಿ ಸೇವಾ ಪ್ರಮುಖ್ ಬೆಳ್ತಂಗಡಿ ಪ್ರಖಂಡ ನಿರೂಪಿಸಿ, ವಂದಿಸಿದರು.

Exit mobile version