ಬೆಳ್ತಂಗಡಿ: ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಗುರುವಾಯನಕೆರೆ ಶಾಖೆ, ಸಂತೆಕಟ್ಟೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣವನ್ನು ನೆರವೇರಿಸಲಾಯಿತು.
ಸಂಸ್ಥೆಯ ಪ್ರಭಾರ ಶಾಖಾ ವ್ಯವಸ್ಥಾಪಕ ಪ್ರಶಾಂತ್ ಎಚ್. ಆಚಾರ್ಯ ಕುಲಶೇಖರ ಮಂಗಳೂರು ಅವರು ಶುಭ ಹಾರೈಸಿದರು. ಸಂಸ್ಥೆಯ ಸಿಬ್ಬಂದಿಗಳಾದ ರಾಮ್ ಪ್ರಸಾದ್ ಎನ್. ಎಸ್. ಗುಂಪಲಾಜೆ, ಸುಶಾಂತ್ ಆಚಾರ್ಯ ಪಣೆಜಾಲು, ಯಜ್ಞೇಶ್ ಆಚಾರ್ಯ ಕುದ್ಯಾಡಿ ಹಾಗೂ ಕಟ್ಟಡ ಮಾಲಕ ಮುಕೇಶ್ ಯೋಗೀಶ್ ಆರ್. ನಾಯಕ್, ಚಿನ್ನಾಭರಣ ಮೌಲ್ಯ ಮಾಪಕ ಗಣೇಶ್ ಆಚಾರ್ಯ ಬಿ. ಸಹಿತ ಮತ್ತಿತರರು ಉಪಸ್ಥಿತರಿದ್ದರು.