ಪದ್ಮುಂಜ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರೋತ್ಸವ ಆಚರಿಸಲಾಯಿತು.
ಎಸ್.ಡಿ.ಎಂ.ಸಿ ಅಧ್ಯಕ್ಷ ಪುರುಷೋತ್ತಮ ಅವರು ಧ್ವಜಾರೋಹಣ ನೆರವೇರಿಸಿದರು.
ಮುಖ್ಯ ಶಿಕ್ಷಕಿ ಕೀರ್ತಿ ಸಹ ಅಧ್ಯಾಪಕಿ ತೇಜಾ ಹಾಗು ಅತಿಥಿ ಶಿಕ್ಷಕಿಯರು ಎಸ್. ಡಿ. ಎಂ. ಸಿ ಸದಸ್ಯರು ದಾನಿಗಳಾದ ಸದಾಶಿವ ಶೆಟ್ಟಿ ಅವರು, ಪೋಷಕರು ಉಪಸ್ಥಿತರಿದ್ದರು. ಉಪಾಧ್ಯಕ್ಷೆ ಗೀತಾ ಸದಸ್ಯರಾದ ಕಾಸಿಂ ಪದ್ಮುಂಜ ಅವರು ಸ್ವಾತಂತ್ರ್ಯದ ಬಗ್ಗೆ ಮಾತನಾಡಿದರು. ಮುಖ್ಯ ಶಿಕ್ಷಕಿ ಕೀರ್ತಿ ಅವರು ಸಹಕರಿಸಿದ ಎಲ್ಲರನ್ನೂ
ಅಭಿನಂದಿಸಿದರು. ವಿದ್ಯಾರ್ಥಿಗಳಾದ ತೃತಿ ಸ್ವಾಗತಿಸಿದರು. ದೃತಿ ನಿರೂಪಿಸಿದರು. ಚಂದನ್ ಧನ್ಯವಾದ ಸಲ್ಲಿಸಿದರು.