Site icon Suddi Belthangady

ವೇಣೂರು: ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

ವೇಣೂರು: ಎಕ್ಸೆಲ್ ಟೆಕ್ನೋ ಸ್ಕೂಲ್ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ವಿದ್ಯೋದಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, ವಿದ್ಯೋದಯ ವಿದ್ಯಾ ಸಂಸ್ಥೆತ ಅಧ್ಯಕ್ಷ ಕೆ. ಶಿವರಾಮ ಹೆಗ್ಡೆ, ಎಕ್ಸೆಲ್ ಟೆಕ್ನೋ ಸ್ಕೂಲ್ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ.ಅವರ ತೀರ್ಥರೂಪರಾದ ಸತೀಶ್ ಕುಮಾರ್ ಆರಿಗ ಮತ್ತು ಶುಭಲತಾ, ಪೆರ್ಮಾಣು ಗುತ್ತಿನ ಸುರೇಶ್ ಆರಿಗ, ಎಕ್ಸೆಲ್ ಟೆಕ್ನೋ ಸ್ಕೂಲ್ ಆಡಳಿತಾಧಿಕಾರಿ ಶಾಂತರಾಜ್ ಜೈನ್, ಶಾಲಾ ಮುಖ್ಯ ಶಿಕ್ಷಕಿ ಸುಜಾತಾ ಬಿ. ಉಪಸ್ಥಿತರಿದ್ದು ಧ್ವಜಾರೋಹಣ ನೆರವೇರಿಸಿ ಸಂದರ್ಭೋಚಿತವಾಗಿ ಮಾತನಾಡಿದರು.

ಬಳಿಕ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ದಿಶ್ಯಾ ಎಸ್ ಶೆಟ್ಟಿ ಮತ್ತು ಪ್ರಾರ್ಥನ್ ಸುವರ್ಣ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಆಕರ್ಷಕ ಪಥ ಸಂಚಲನ ನಡೆಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರಸಾದ್ ಮಾರ್ಗದರ್ಶನ ಮಾಡಿದರು. ಶಿಕ್ಷಕರಾದ ಶ್ವೇತಾ ಎ. ಜೈನ್ ಸ್ವಾಗತಿಸಿ, ಪೂಜಿತಾ ಬಿ.ಕೆ. ಮತ್ತು ಮಾಲತಿ ವಿಜೇತರ ಪಟ್ಟಿ ವಾಚಿಸಿದರು. ಕೃಷ್ಣಪ್ಪ ಎಂ‌.ಕೆ. ನಿರೂಪಿಸಿ, ಅಕ್ಷತಾ ಹೆಗ್ಡೆ,ನಮನಾ, ತೀರ್ಥ ಪ್ರಸಾದ್, ವಿಂದ್ಯಾ ಮತ್ತು ಶಿಕ್ಷಕ‌ – ಶಿಕ್ಷಕ್ಷೇತರ ಬಂಧುಗಳು‌ ಸಹಕರಿಸಿದರು. ಸನ್ಮತಿ ಧನ್ಯವಾದವಿತ್ತರು.

Exit mobile version