Site icon Suddi Belthangady

ಪಟ್ರಮೆ: ಡಿವೈಎಫ್ಐಯಿಂದ ಶಾಲಾ ಮಕ್ಕಳಿಗೆ ಸಂವಿಧಾನ ಪುಸ್ತಕ ಕೊಡುಗೆ

ಪಟ್ರಮೆ: ಪಟ್ರಮೆ ಗ್ರಾಮದ ಅನಾರು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ಸಂಭ್ರಮದ ಸಭಾ ಕಾರ್ಯಕ್ರಮದಲ್ಲಿ ಪಟ್ರಮೆ ಡಿವೈಎಫ್ಐ ಘಟಕದ ವತಿಯಿಂದ ವಿದ್ಯಾರ್ಥಿಗಳಿಗಾಗಿಯೇ ನಿವೃತ್ತ ನ್ಯಾ. ನಾಗಮೋಹನದಾಸ್ ಬರೆದಿರುವ ಸಂವಿಧಾನ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿ ಮಾದರಿ ಎನಿಸಿದರು. 5ನೇ ತರಗತಿಯಿಂದ 8ನೇ ತರಗತಿ ವರೆಗಿನ ಎಲ್ಲಾ ಮಕ್ಕಳಿಗೆ ಈ ಸಂವಿಧಾನ ಪುಸ್ತಕ ವಿತರಿಸಲಾಯಿತು. 3 ಮತ್ತು 4ನೇ ತರಗತಿ ಮಕ್ಕಳಿಗೆ ಪಂಚತಂತ್ರದ ಕತೆ ಪುಸ್ತಕಗಳನ್ನು ಹಾಗೂ 1 ಮತ್ರು 2ನೇಯ ತರಗತಿ ಮಕ್ಕಳಿಗೆ ಡ್ರಾಯಿಂಗ್ ಪುಸ್ತಕಗಳನ್ನು ವಿತರಿಸಲಾಯಿತು.

ಪಟ್ರಮೆ ಡಿವೈಎಫ್ಐ ಅಧ್ಯಕ್ಷ ಭುವನೇಶ್ ಪುಸ್ತಕಗಳನ್ನು ಹಸ್ತಾಂತರಿಸಿದರು. ಡಿವೈಎಫ್ಐನ ಪಟ್ರಮೆ ಘಟಕದ ಲೋಕೇಶ್ ಪಚ್ಚೆಮಿ, ಜಯಂತ್, ವಿಶಾಲು ಪಾದೇಜಾಲು, ಎಸ್.ಎಫ್.ಐ ಜಿಲ್ಲಾ ಕಾರ್ಯದರ್ಶಿ ವಿನುಶರಮಣ ಉಪಸ್ಥಿತರಿದ್ದರು.‌

Exit mobile version