ಚಾರ್ಮಾಡಿ: ವಿಶ್ವ ಹಿಂದೂ ಪರಿಷತ್ ವತಿಯಿಂದ ವಿಶ್ವ ಹಿಂದೂ ಪರಿಷತ್ ನ 61ನೇ ಸ್ಥಾಪನ ದಿನವನ್ನು ಆಚರಿಸಲಾಯಿತು. ಚಾರ್ಮಾಡಿಯ ಸಂಘಟನೆ ಹಿರಿಯರಾದ ಕೇಶವ ಮೂಲ್ಯ ಜಿ. ಪಡೆಂಕಲ್ಲು ಪ್ರಾಸ್ತವಿಕವಾಗಿ ಮಾತನಾಡಿ ನಮ್ಮ ಧಾರ್ಮಿಕ ಶ್ರದ್ದಾ ಕೇಂದ್ರಗಳ ಮೇಲೆ ದಾಳಿ ಮಾಡುವ ದುಷ್ಟ ಶಕ್ತಿಗಳ ವಿರುದ್ಧ ನಾವೆಲ್ಲ ಜೊತೆಯಾಗಿ ನಿಂತು ಹೋರಾಡುವ ಕಾಲ ಘಟ್ಟದಲ್ಲಿ ನಾವೆಲ್ಲಾ ಇದ್ದೇವೆ ವಿಶ್ವ ಹಿಂದೂ ಪರಿಷತ್ ಸ್ಥಾಪನೆ ಆದ ದಿನದಿಂದಲೂ ಹಿಂದೂಗಳ ಮತ್ತು ಹಿಂದೂ ಶ್ರದ್ದಾ ಕೇಂದ್ರಗಳನ್ನು ಉಳಿಸುವ ನಿಟ್ಟಿನಲ್ಲಿ ಹೋರಾಡುತ್ತಲೆ ಬಂದಿದೆ ಎಂದು ತಿಳಿಸಿದರು.
ಇಂದಿನ ಸಭೆಯಲ್ಲಿ ಚಾರ್ಮಾಡಿ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಹೊಸಮಠ, ವಿಶ್ವ ಹಿಂದೂ ಪರಿಷತ್ ಗ್ರಾಮ ಸಮಿತಿಯ ಅಧ್ಯಕ್ಷ ಜಿತೇಂದ್ರ ಚಾರ್ಮಾಡಿ ಉಪಸ್ಥಿತರಿದ್ದರು. ದಿವಿನೇಶ್ ಮೈಕಾನ್ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.