ಕುತ್ಲೂರು: ಸ.ಉ.ಪ್ರಾ. ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ವತಿಯಿಂದ ವಿವಿಧ ಕೊಡುಗೆಗಳನ್ನು ನೀಡುವ ವಿಶೇಷ ಕಾರ್ಯಕ್ರಮವನ್ನು ಆ.14ರಂದು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಮಕ್ಕಳಿಗೆ ದಾನಿಗಳು ಕೊಡ ಮಾಡಿದ ಟೈ, ಬೆಲ್ಟ್ ಮತ್ತು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 1ನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಹಳೆ ವಿದ್ಯಾರ್ಥಿಗಳ ವತಿಯಿಂದ ರೂ 1000 ಮೊತ್ತವನ್ನು ಒಳಗೊಂಡ ಅಂಚೆ ಕಛೇರಿಯ ಪಾಸ್ ಪುಸ್ತಕ ನೀಡುವ ಯೋಜನೆ, ಬ್ಯಾಂಡ್ ಸೆಟ್ಟಿನ 15 ವಿದ್ಯಾರ್ಥಿಗಳಿಗೆ ಟೋಪಿ ವಿತರಣೆ, ಶ್ರೀ ಬಾಬುಶೆಟ್ಟಿ ನಿವೃತ್ತ ಕನ್ನಡ ಭಾಷಾ ಶಿಕ್ಷಕರು ವಿರಚಿತ 10 ಪುಸ್ತಕಗಳನ್ನು ಶಾಲೆಯ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ. ಅಧ್ಯಕ್ಷ ಕನಕವರ್ಮ ಜೈನ್, ಭೋಜೇಗೌಡ ಪ್ರಗತಿಪರ ರೈತರು, ಅರ್ವ, ಲಯನ್ಸ್ ಕ್ಲಬ್ ವೇಣೂರಿನ ನಿಕಟ ಪೂರ್ವ ಅಧ್ಯಕ್ಷ ನಿರಂಜನ್, ಎಸ್.ಡಿ.ಎಮ್.ಸಿ. ನಿಕಟ ಪೂರ್ವ ಅಧ್ಯಕ್ಷ ರಾಮಚಂದ್ರ ಭಟ್, ಹಳೆವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಿಮಿತ್ ಜೈನ್, ನಾರಾವಿ ಗ್ರಾಮ ಪಂಚಾಯತ್ ಸದಸ್ಯ ಸಂತೋಷ ಮರ್ದೋಟ್ಟು ಹಾಗೂ ಸುದರ್ಶನ್ ಹೆಗ್ಡೆ, ಹಳೆ ವಿದ್ಯಾರ್ಥಿ ಯಾದ ಶಿವರಾಜ್ ಅಂಚನ್, ಎಸ್.ಡಿ.ಎಮ್.ಸಿ. ಉಪಾಧ್ಯಕ್ಷೆ ಶ್ವೇತಾ ಜಗದೀಶ್, ಶ್ರೀ ಧ. ಗ್ರಾ. ಯೋಜನೆಯ ಸೇವಾ ಪ್ರತಿನಿಧಿ ಉಷಾ ಸಂತೋಷ, ಪ್ರಧಾನ ಗುರುಗಳು, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.