Site icon Suddi Belthangady

ನಾಳ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೇವಾ ಕೌಂಟರ್ ಉದ್ಘಾಟನೆ: ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ನಾಳ: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಭಗವದ್ಭಕ್ತರ ಅನುಕೂಲಕ್ಕಾಗಿ ಸೇವಾ ಕೌಂಟರಿನ ಉದ್ಘಾಟನೆಯನ್ನು ಆ. 15 ರಂದು ರೈತ ಬಂದು ಆಹಾರೋದ್ಯಮದ ಆಡಳಿತದಾರ ಶಿವಶಂಕರ ನಾಯಕ್ ನೆರವೇರಿಸಿದರು. ಜೊತೆಗೆ 79ನೇ ಸ್ವಾತಂತ್ರೋತ್ಸವದ ಅಂಗವಾಗಿ ಹುತಾತ್ಮರಾದ ಸ್ವಾತಂತ್ರ್ಯ ಹೋರಾಟಗಾರರಿಗೆ ಪರಮ ಸಾಯುಜ್ಯಕ್ಕಾಗಿ ವಿಶೇಷ ಪ್ರಾರ್ಥನೆಯನ್ನು ನೆರವೇರಿಸಲಾಯಿತು.

ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಬಿ.ಹರೀಶ್ ಕುಮಾರ್, ಸದಸ್ಯರಾದ ರಾಘವ ಹೆಚ್, ಶರತ್ ಕುಮಾರ್ ಶೆಟ್ಟಿ, ಹರೀಶ್ ಗೌಡ ಹಾಗೂ ಊರಿನ ಭಗವದ್ಭಕ್ತರಾದ ಅಂಬಾ ಬಿ. ಆಳ್ವ, ಅಶೋಕ್ ಆಚಾರ್ಯ, ಸತೀಶ್ ಭಂಡಾರಿ, ಜಗನಾಥ ಪೂಜಾರಿ ವಂಜಾರೆ, ಸತೀಶ್ ನಾಯ್ಕ್ ಭಕ್ತ ರು ಉಪಸ್ಥಿತರಿದ್ದರು. ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಉದ್ಘಾಟನೆಯನ್ನು ತೆಂಗಿನ ಸಸಿ ನೆಡುವ ಮೂಲಕ
ಕಳಿಯ ಬೀಡಿನ ಸುರೇಂದ್ರ ಕುಮಾರ್ ಜೈನ್ ನೆರವೇರಿಸಿದರು.

Exit mobile version