Site icon Suddi Belthangady

ಪರೀಕ ಸೌಖ್ಯವನದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನ ಪರೀಕದಲ್ಲಿ ದೇಶದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯವೈದ್ಯಾಧಿಕಾರಿ ಡಾ॥ ಗೋಪಾಲ ಪೂಜಾರಿ ಅವರು ಧ್ವಜಾರೋಹಣವನ್ನು ನೆರವೇರಿಸಿ ತನ್ನ ಶುಭ ಸಂದೇಶದಲ್ಲಿ ಪ್ರಸ್ತುತ ಭಾರತವು ಆನೇಕ ವಿಚಾರಗಳಲ್ಲಿ ಮುಂದುವರಿದ ರಾಷ್ಟ್ರವಾಗಿ ಮುಂದುವರಿದಿದ್ದು ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ಅನೇಕ ಮಂದಿ ತಮ್ಮ ಬಲಿದಾನವನ್ನು ಮಾಡಿದ್ದು ಆ ಮಹಾತ್ಮರ ನೆನಪನ್ನು ನಾವು ಈ ಸಂದರ್ಭದಲ್ಲಿ ಮಾಡುವುದು ಸೂಕ್ತ ಎಂದು ತಿಳಿಸಿದರು.

ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ದೂರದೃಷ್ಠಿಯಿಂದ ಸ್ಥಾಪನೆ ಮಾಡಿದ ಪ್ರಕೃತಿ ಚಿಕಿತ್ಸಾ ಕೇಂದ್ರಗಳು ದೇಶ ವಿದೇಶದಲ್ಲಿ ಪ್ರಖ್ಯಾತಿಯನ್ನು ಪಡೆದು ಔಷಧಿ ರಹಿತ ಚಿಕಿತ್ಸಾ ಪದ್ದತಿಯಾದ ಇದಕ್ಕೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಕೂಡ ತನ್ನ ಒಲವು ಹಾಗೂ ಬದ್ದತೆಯನ್ನು ವ್ಯಕ್ತ ಪಡಿಸಿದ್ದರು ಎಂದು ತಿಳಿಸಿದರು.

ಸಾಧಕರಾಗಿ ಅತಿಥಿ ಸ್ಥಾನದಿಂದ ಉಪಸ್ಥಿತರಿದ್ದ ದಿನೇಶ್ ಮೈಸೂರು ಅವರು ಶುಭ ಹಾರೈಸಿ ಸೌಖ್ಯವನದ ಬಗ್ಗೆ ತನ್ನ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ಡಾ. ಶೋಭಿತ್ ಶೆಟ್ಟಿ ಹಾಗೂ ಡಾ ಪೂಜಾ ಜಿ. ಅವರು ತಮ್ಮ ಅನಿಸಿಕೆಗಳ ಮಾತುಗಳನ್ನಾಡಿದರು. ಸೌಖ್ಯವನದ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಅವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯವಾದವನ್ನಿತ್ತರು.

Exit mobile version