Site icon Suddi Belthangady

ಮಾಚಾರು ಜುಮ್ಮಾ ಮಸೀದಿಯಲ್ಲಿ ಸ್ವಾತಂತ್ರ ದಿನಾಚರಣೆ

ಉಜಿರೆ: ಮಾಚಾರ್ ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ವಠಾರದಲ್ಲಿ 79ರ ಸ್ವತಂತ್ರವು ವಿಜ್ರಂಭನೆಯಿಂದ ನಡೆಯಿತು. ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ಜಮಾಅತ್ ಅಧ್ಯಕ್ಷ ಬಿ. ಎಂ. ಇಲ್ಯಾಸ್ ನೆರವೇರಿಸಿದರು. ಖತೀಬು ಉಸ್ತಾದ ಸಲೀಂ ಸಖಾಫಿ ಸಂದೇಶ ಭಾಷಣ ಹಾಗೂ ದುಆ ನಿರ್ವಹಿಸಿದರು. ಸಮಾರಂಭದಲ್ಲಿ ವಿಧ್ಯಾರ್ಥಿಗಳಿಂದ ಸ್ವಾತಂತ್ರ್ಯ ಹೋರಾಟಗಾರ ರ ಬಗ್ಗೆ ಭಾಷಣ ನಡೆಯಿತು.
ಸಮಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಮಾಚಾರ್ ಸ್ವಾಗತಿಸಿದರು.

ಸದರ್ ಉಸ್ತಾದರಾದ ಹೈದರ್ ಹಿಷಾಮಿ, ಅಕ್ಬರ್ ಅಲಿ ಬಂಡಸಾಲೆ, ಹಸೈನಾರ್ H.K.G.N, ಸಲಾಮ್ ಅಂಗಡಿ, ರಶೀದ್ ಫ್ರೂಟ್ಸ್ , ಅನ್ಸಾರ್ ಬೆದ್ರಳಿಕೆ SYS ಪ್ರಧಾನ ಕಾರ್ಯದರ್ಶಿ ಅನ್ಸಾರ್ ಸ‌ಅದಿ ,SSF ಅಧ್ಯಕ್ಷ ಬಶೀರ್ ಕುದುರು, ಶರೀಫ್ ಬೆದ್ರಳಿಕೆ, ಹಕೀಮ್ ಕುದುರು, ನೌಶಾದ್ ಬಿ ಎಮ್ ಸಹಿತ ಜಮಾತರು ಉಪಸ್ಥಿತರಿದ್ದರು. ಯಂಗ್ ಬಾಯ್ಸ್ ಮಾಚಾರ್ ಇದರ ವತಿಯಿಂದ, ಶಾಲೆಯ ಮಕ್ಕಳು, ಮದ್ರಸದ ಮಕ್ಕಳಿಗೆ ಸಿಹಿ ತಿಂಡಿ ಹಾಗೂ ಪಾನೀಯ ವಿತರಿಸಲಾಯಿತು.

Exit mobile version