Site icon Suddi Belthangady

ಬೆಳ್ತಂಗಡಿ: ಅಕ್ರಮ ಗಾಂಜಾ ದಾಸ್ತಾನು ಮತ್ತು ಮಾರಾಟ ಪ್ರಕರಣ: ಆರೋಪಿ ಬಂಧನ

ಬೆಳ್ತಂಗಡಿ: ಅಕ್ರಮ ಗಾಂಜಾ ದಾಸ್ತಾನು ಮತ್ತು ಮಾರಾಟ ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸರಿಂದ ಹಲವು ಸಮಯಗಳಿಂದ ತಲೆಮರಿಸಿಕೊಂಡಿದ್ದ ಆರೋಪಿ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ನಿವಾಸಿ ರಫೀಕ್(39) ಎಂಬಾತನನ್ನು ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್‌ ಪೆಕ್ಟರ್ ಸುಬ್ಬಾಪುರ್ ಮಠ್ ನೇತೃತ್ವದ ಪೊಲೀಸ್‌ ಆ.14ರಂದು ಕಾರ್ಕಳದಲ್ಲಿ ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಆರೋಪಿ ಮದಡ್ಕ ರಫೀಕ್ ವಿರುದ್ಧ ಈಗಾಗಲೇ ಬೆಳ್ತಂಗಡಿ ಪೊಲೀಸ್ ಠಾಣೆ, ವೇಣೂರು ಪೊಲೀಸ್‌ ಠಾಣೆ, ಚಿಕ್ಕಮಗಳೂರು CEN ಪೊಲೀಸ್ ಠಾಣೆ, ಬಣಕಲ್ ಪೊಲೀಸ್ ಠಾಣೆ, ದಕ ಜಿಲ್ಲಾ CEN ಪೊಲೀಸ್‌ ಠಾಣೆ, ಹಾಗೂ ಬಂಟ್ವಾಳ ಅಬಕಾರಿ ಠಾಣೆ, ಬೆಳ್ತಂಗಡಿ ಅಬಕಾರಿ ಠಾಣೆಯಲ್ಲಿ ಗಾಂಜಾ ಪ್ರಕರಣಗಳು ದಾಖಲಾಗಿರುತ್ತದೆ.

Exit mobile version