ಧರ್ಮಸ್ಥಳ: ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಆ.14ರಂದು ನೇತ್ರಾವತಿ ನದಿಯ ಕಿಂಡಿ ಅಣೆಕಟ್ಟಿನ ಮತ್ತೊಂದು ಭಾಗದ ಗುರುತು ಸಂಖ್ಯೆ 17ರ ಉತ್ಖನನ ಕಾರ್ಯ ಮುಗಿದಿದ್ದು, ಯಾವುದೇ ಕಳೇಬರದ ಕುರುಹುಗಳು ಪತ್ತೆಯಾಗಿಲ್ಲ.
ಖಾಸಗಿ ವ್ಯಕ್ತಿಗಳ ತೋಟದ ಭಾಗದಿಂದಾಗಿ ಗುರುತು ಸಂಖ್ಯೆ 17ಕ್ಕೆ ತೆರಳಿದ ತಂಡ ಉತ್ಖನನ ನಡೆಸಿದೆ. ಆದರೆ ಯಾವುದೇ ಕಳೇಬರ ಪತ್ತೆಯಾಗಿಲ್ಲ ಅನ್ನುವ ಮಾಹಿತಿ ಲಭಿಸಿದೆ.