ಬೆಳ್ತಂಗಡಿ: ದ.ಕ.ಜಿಲ್ಲಾ ಶಾಮಿಯಾನ ಮಾಲಕರ ಸಂಘ ಬೆಳ್ತಂಗಡಿ ಘಟಕದ 2024-25ನೇ ಸಾಲಿನ ವಾರ್ಷಿಕ ಮಹಾ ಸಭೆ ಆ. 12ರಂದು ಅಳದಂಗಡಿ ದೀಪಾ ಸಭಾಭವನದಲ್ಲಿ ನಡೆಯಿತು. ಬೆಳ್ತಂಗಡಿ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಗೇರುಕಟ್ಟೆ ಜ್ಯೋತಿ ಶಾಮಿಯಾನದ ಹರೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬೆಳ್ತಂಗಡಿ ಸಂಘದ ಸ್ಥಾಪಕ ಅಧ್ಯಕ್ಷ ಗುರುವಾಯನಕೆರೆ ಎಸ್.ಎಂ.ಎಸ್ ಶಾಮಿಯಾನದ ಹಾಜಿ ಅಬ್ದುಲ್ ಲತೀಫ್, ಪ್ರಧಾನ ಕಾರ್ಯದರ್ಶಿ ಧರ್ಮಪ್ಪ ಮೂಲ್ಯ ಬಂಗಾಡಿ, ಕೋಶಾಧಿಕಾರಿ ಜೋಸೆಫ್ ಕೆ.ಡಿ. ಕಾಯರ್ತಡ್ಕ ಅಭಿಲಾಷ್ ಶಾಮಿಯಾನದ ಜೋಸೆಫ್ ಕೆ.ಡಿ., ಮುಖ್ಯ ಅತಿಥಿಗಳಾಗಿ ದ. ಕ ಜಿಲ್ಲಾ ಸಂಘದ ಅಧ್ಯಕ್ಷ ಬಾಬು ಕೆ. ವಿಟ್ಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮ್ಯಾಕ್ಸಿಯಂ ಸಿಕ್ವೇರಾ ಬಂಟ್ವಾಳ, ಜಿಲ್ಲಾ ಕೋಶಾಧಿಕಾರಿ ನಿಶಿತ್ ಪೂಜಾರಿ ಮಂಗಳೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಸ್ಥಾಪಕ ಅಧ್ಯಕ್ಷ ಹಾಜಿ ಅಬ್ದುಲ್ ಲತೀಫ್ ಸ್ವಾಗತಿಸಿದರು. ತದನಂತರ 2024.25 ಸಾಲಿನ ವಾರ್ಷಿಕ ವರದಿಯನ್ನು ಸಂಘದ ಪ್ರದಾನ ಕಾರ್ಯದರ್ಶಿ ಧರ್ಣಪ್ಪ ಮೂಲ್ಯ ಮಂಡಿಸಿದರು. ವಾರ್ಷಿಕ ಲೆಕ್ಕ ಪತ್ರವನ್ನು ಕೋಶಾಧಿಕಾರಿ ಜೋಸೆಫ್ ಕೆ. ಡಿ. ಮಂಡಿಸಿದರು. ಸಂಘದ ಸದಸ್ಯರ ಮಕ್ಕಳಿಗೆ ಹತ್ತನೇ ತರಗತಿ ಹಾಗೂ ಪಿಯುಸಿ 80 ಶೇಕಡಾ ಮೇಲೆ ಅಂಕ ಪಡೆದ ಮಕ್ಕಳನ್ನು ಸನ್ಮಾನಿಸಲಾಯಿತು. ನಂತರ ಸಂಘದ ಹಿರಿಯ ಮೂರು ಸದಸ್ಯರನ್ನ ಗೌರವಿಸಲಾಯಿತು. ಮಾತುಕುಟ್ಟಿ ಓಡಂಪಲ್ಲಿಲ್ ಶಾಮಿಯಾನ ಧರ್ಮಸ್ಥಳ, ಜನಾರ್ಧನ ಶೆಟ್ಟಿ ಮಡಂತ್ಯಾರು ನಿರೂಪಿಸಿದರು. ಅವಿಲ್ ಡೇಸಾ ವಂದಿಸಿದರು.