ಬೆಳ್ತಂಗಡಿ:ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಪ್ರಖಂಡದ ಆಶ್ರಯದಲ್ಲಿ ನಡೆಯುವ ಅಖಂಡ ಭಾರತ ಸಂಕಲ್ಪ ದಿನದ ಆಮಂತ್ರಣ ಪತ್ರಿಕೆ ಬಿಡುಗಡೆಯು ಆ.8ರಂದು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು.
ಕಳೆಂಜ ಸ್ವಾಮಿ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ನ ಅಧ್ಯಕ್ಷ ಡಾ.ಎಂ.ಎಂ. ದಯಾಕರ್, ವಿಶ್ವ ಹಿಂದೂ ಪರಿಷದ್ ಬೆಳ್ತಂಗಡಿ ಪ್ರಖಂಡ ಅದ್ಯಕ್ಷ ವಿಷ್ಣು ಮರಾಠೆ, ಉಜಿರೆಯ ಹಿಂದೂ ಮುಖಂಡ ಪದ್ಮನಾಭ ಶೆಟ್ಟಿಗಾರ್, ಬೆಳ್ತಂಗಡಿ ಪ್ರಖಂಡದ ವಿ.ಹಿಂ.ಪ. ಕಾರ್ಯದರ್ಶಿ ರಮೇಶ್ ಧರ್ಮಸ್ಥಳ, ವಿ.ಹಿಂ.ಪ ಗೋರಕ್ಷಾ ಪ್ರಮುಖ್ ಸಂತೋಷ್ ಅತ್ತಾಜೆ, ವಿ.ಹಿಂ.ಪ ಸೇವಾ ಪ್ರಮುಖ್ ಮೋಹನ್, ವಿ.ಹಿಂ.ಪ ಬಜರಂಗದಳದ ಪ್ರಚಾರ ಪ್ರಸಾರ ಪ್ರಮುಖ್ ನಾಗೇಶ್ ಕಲ್ಮಂಜ, ವಿ.ಹಿಂ.ಪ ಬಜರಂಗದಳದ ಬಲೋಪಾಸನಾ ಪ್ರಮುಖ್ ಮನೀಷ್ ಉಜಿರೆ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.