ಕೊಕ್ಕಡ: ಸೌತಡ್ಕ ಕಡೀರ ಪ್ರದೇಶದಲ್ಲಿ ಕಾಡಾನೆ ದಾಳಿ ಮಾಡಿದ ಘಟನೆ ಆ. 12ರಂದು ರಾತ್ರಿ ನಡೆದಿದೆ.
ಕಡೀರ ಕೋಟಿಯಪ್ಪ ಗೌಡ ಹಾಗೂ ಕಡೀರ ಗೋಪಾಲ ಅವರ ತೋಟಕ್ಕೆ ನುಗ್ಗಿದ ಕಾಡಾನೆಯು ಅಪಾರ ಕೃಷಿ ಹಾನಿ ಮಾಡಿದ್ದು, ಬಾಳೆ ಗಿಡ, ತೆಂಗಿನ ಗಿಡಗಳಿಗೆ, ಅಡಿಕೆ ಗಿಡ ಹಾಗೂ ನೀರಿನ ಡ್ರಮ್ ಗೆ ಹಾನಿ ಉಂಟುಮಾಡಿದೆ. ಅರಣ್ಯ ಇಲಾಖೆಯವರು ಇದರ ಬಗ್ಗೆ ಗಮನ ಹರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.