Site icon Suddi Belthangady

ಪುದುವೆಟ್ಟು: ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ

ಪುದುವೆಟ್ಟು: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಪಕ್ಷ ಸಂಘಟನಾ ದೃಷ್ಟಿಯಿಂದ ಆ.11ರಂದು ನಡೆದ ಪುದುವೆಟ್ಟು ಶಕ್ತಿ ಕೇಂದ್ರ ಪಂಚಾಯತ್ ಮಟ್ಟದ ಅಭ್ಯಾಸವರ್ಗ ಸಭೆ ನಡೆಯಿತು. ಹಿರಿಯ ಕಾರ್ಯಕರ್ತರಾದ ದಿವಾಕರ ಗೌಡ ಮುಚ್ಚಾರು, ಪುಟ್ಟ ಗೌಡ ಬರಮೇಲು, ನಾರಾಯಣ ಪೂಜಾರಿ ಕಾಯರಂಡ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಮಂಡಲ ಉಪಾಧ್ಯಕ್ಷ ಅಭ್ಯಾಸವರ್ಗ ಸಂಚಾಲಕ ಕೊರಗಪ್ಪ ಗೌಡ ಚಾರ್ಮಾಡಿ ಉದ್ಘಾಟನ ಭಾಷಣ ನೆರವೇರಿಸಿದರು. ಶಾಸಕ ಹರೀಶ್ ಪೂಂಜ ಅವರು ಪಾಲ್ಗೊಂಡು ಕಾರ್ಯಕರ್ತರೊಂದಿಗೆ ಪಕ್ಷ ಸಂಘಟನೆ ಮತ್ತು ಕಾರ್ಯಚಟುವಟಿಕೆಯ ಕುರಿತು ವಿಸ್ತ್ರುತವಾಗಿ ಸಮಾಲೋಚನೆ ನಡೆಸಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೀತಾರಾಮ್ ಬೆಳಾಲು, ರಾಜೇಶ್ ಪೆರ್ಮುಡ, ಮಂಡಲ ಉಪಾಧ್ಯಕ್ಷ ಮೋಹನ್ ಅಂಡಿಂಜೆ, ಉಜಿರೆ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ನಿರಂಜನ್ ಶೆಟ್ಟಿ ಬೈಠಕ್ ನೀಡಿದರು.

ಉಜಿರೆ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಯಶವಂತ ಗೌಡ ಡೆಚ್ಚಾರು, ನಾರಾವಿ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಅಭಿಜಿತ್ ಜೈನ್, ಪುದುವೆಟ್ಟು ಪಂಚಾಯತ್ ಅಧ್ಯಕ್ಷ, ಶಕ್ತಿ ಕೇಂದ್ರ ಪ್ರಮುಖ ಪೂರ್ಣಾಕ್ಷ, ಹಿರಿಯರಾದ ಶ್ರೀಧರ್ ನಾಯರ್, ಸಂಜೀವ ಗೌಡ ಅರಸೋಲಿಗೆ, ಅಣ್ಣು ಗೌಡ ಕೊಡಪೊಟ್ಯ, ಬೂತ್ ಅಧ್ಯಕ್ಷರಾದ ನಿತ್ಯಾನಂದ ಗೌಡ, ಸೋಯ್ ವರ್ಗಿಸ್, ಚಂದ್ರಹಾಸ, ಬೂತ್ ಕಾರ್ಯದರ್ಶಿಗಳಾದ ಗುರುಪ್ರಸಾದ್ ಕೋಟ್ಯಾನ್, ಆನಂದ ಕಲ್ಲಾಜೆ, ಜನಪ್ರತಿನಿದಿನಗಳು ಹಾಗೂ ಅನ್ಯನ್ಯ ಜವಾಬ್ದಾರಿಯ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು. ದಾಮೋದರ ಮುಜರ್ ದಡ್ದ್, ಭಾಸ್ಕರ ಪೂಜಾರಿ ಅಡ್ಯ ಕಾರ್ಯಕ್ರಮ ನಿರ್ವಹಿಸಿದರು.

Exit mobile version