Site icon Suddi Belthangady

ಬೆಳ್ತಂಗಡಿ: ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾರತ್‌ ಸ್ಕೌಟ್ಸ್ ಮತ್ತು ಗೈಡ್ಸ್ ನ ಬನ್ನಿಸ್ ಟಂಟೋಲ ದಳದ ಚಟುವಟಿಕಾ ಪ್ರಾರಂಭೋತ್ಸವ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗಾಗಿ ಬನ್ನಿಸ್ ದಳದ ರೋವ‌ರ್ ಸೌಟ್ ಲೀಡರ್ ಲಕ್ಷ್ಮೀಶ ಆರ್. ಭಟ್ ಶ್ರೀ ಧರ್ಮಸ್ಥಳ ಪದವಿ ಪೂರ್ವ ಕಾಲೇಜು ಉಜಿರೆ, ಬೆಳ್ತಂಗಡಿ ಮಕ್ಕಳಿಗೆ ಬನ್ನಿಸ್ ಏಪ್ರೋನ್ ನೀಡುವ ಮೂಲಕ ಕ್ರಿಯಾ ಚಟುವಟಿಕೆಯನ್ನು ಉದ್ಘಾಟಿಸಿ, ಮಾತನಾಡಿ ಸ್ಕೌಟ್ಸ್ ಮತ್ತು ಗೈಡ್ಸ್ ಶಿಸ್ತು ಬದ್ಧ ಚಟುವಟಿಕೆ ಮುಂದಕ್ಕೆ ಸ್ಕೌಟ್ಸ್ ಗೈಡ್ ನಲ್ಲಿ ಒಳ್ಳೆಯ ಭವಿಷ್ಯವಿದೆ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಮುಖ್ಯ ಶಿಕ್ಷಕಿ ಹೇಮಲತಾ ಎಂ. ಆರ್. ರವರ ಸಲಹೆ ಸೂಚನೆಯ ಮೇರೆಗೆ ಪ್ರಭಾರ ಮುಖ್ಯ ಶಿಕ್ಷಕಿ ಜಸಿಂತಾ ರೋಡ್ರಿಗಸ್‌ ಅಧ್ಯಕ್ಷತೆ ವಹಿಸಿದ್ದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕಾರ್ಯದರ್ಶಿ ಪ್ರಮೀಳಾ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಮೀಳಾ ಪೂಜಾರಿ ಸಂಘಟಿಸಿದ ಕಾರ್ಯಕ್ರಮದಲ್ಲಿ ಸೈಟ್ ಮಾಸ್ಟರ್ ಶಿಕ್ಷಕಿ ಗೀತಾ ಪಿ. ನಿರೂಪಿಸಿ, ಮಂಜುನಾಥ್, ಕಾರುಣ್ಯ, ಜಯರಾಮ್, ಪ್ರಮೀಳಾ ಎನ್., ರಮ್ಯ, ಬಿ.ಎಸ್., ಜಯಲಕ್ಷ್ಮಿ, ನೀತಾ ಕೆ.ಎಸ್. ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Exit mobile version