Site icon Suddi Belthangady

34ನೇ ಉಚಿತ ಟೈಲರಿಂಗ್‌ ತರಬೇತಿ ಶಿಬಿರ ಉದ್ಘಾಟನೆ

ನಿಡ್ಲೆ: ಸೇವಾಭಾರತಿ ಕನ್ಯಾಡಿ ನೇತೃತ್ವದಲ್ಲಿ ಸಬಲಿನಿ ಯೋಜನೆಯಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ನಿಡ್ಲೆ ಗ್ರಾಮ ಪಂಚಾಯತ್, ನಿಡ್ಲೆ ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟದ ಸಹಭಾಗಿತ್ವದಲ್ಲಿ ಮಹಿಳೆಯರಿಗಾಗಿ ಉಚಿತ 34ನೇ ಟೈಲರಿಂಗ್‌ ತರಬೇತಿ ಶಿಬಿರದ ಉದ್ಘಾಟನೆ ಆ. 11ರಂದು ನಡೆಯಿತು.

ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಅಧ್ಯಕ್ಷ ಧನಂಜಯ ಗೌಡ ಅವರು ಚಾಲನೆ ನೀಡಿ ನಾವು ಯಾವಾಗಲೂ ಇನ್ನೊಬ್ಬರ ನೆರಳಿನಲ್ಲಿ ಬದುಕದೆ ಸ್ವ – ಉದ್ಯೋಗ ಮಾಡುವುದರ ಮೂಲಕ ನಮ್ಮ ಬದುಕಿಗೆ ನಾವೇ ದಾರಿದೀಪವಾಗಬೇಕು, ಈ ತರಬೇತಿ ಶಿಬಿರವು ಸ್ವ-ಉದ್ಯೋಗದ ಕಡೆಗೆ ಮಹತ್ವದ ಹೆಜ್ಜೆಯಾಗಿದೆ ಎಂದರು.

ಕನ್ಯಾಡಿ ಸೇವಾಭಾರತಿ ಕಾರ್ಯದರ್ಶಿ ಬಾಲಕೃಷ್ಣ ಅವರು ಮಾತನಾಡಿ ಮಹಿಳೆಯರು ಸ್ವಂತ ಕೆಲಸವನ್ನು ಮಾಡಿ ಸಮಾಜದಲ್ಲಿ ಗುರುತಿಸಿಕೊಳ್ಳುತ್ತೇವೆ ಎಂಬ ಧೈರ್ಯ ಇದ್ದರೆ ಯಾವುದು ಅಸಾಧ್ಯವಾದ ಮಾತಲ್ಲ ಎಲ್ಲವೂ ಸಾಧ್ಯ ಎಂದು ಶುಭಹಾರೈಸಿದರು.

ನಿಡ್ಲೆ ಗ್ರಾಮ ಪಂಚಾಯತ್ ಸದಸ್ಯ ಮೋಹನ್ ಪೂಜಾರಿ, ನಿಡ್ಲೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ್, ಗ್ರಾಮಪಂಚಾಯತ್ ಸದಸ್ಯೆ ಹೇಮಾವತಿ, ಟೈಲರಿಂಗ್ ತರಬೇತುದಾರೆ ರಜನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಬಿರದಲ್ಲಿ ಒಟ್ಟು 32 ಮಂದಿ ಮಹಿಳಾ ಶಿಬಿರಾರ್ಥಿಗಳು ಭಾಗವಹಿಸಿದ್ದು, ಮಹಿಳಾ ಸಬಲಿಕರಣದತ್ತ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಕಾರ್ಯಕ್ರಮದಲ್ಲಿ ಹೇಮಾವತಿ ಸ್ವಾಗತಿಸಿ, ಸೇವಾಭಾರತಿಯ ಡಾಕ್ಯುಮೆಂಟೇಶನ್, ಮೋನಿಟರಿಂಗ್ ಮತ್ತು ಇವ್ಯಾಲ್ಯೂಯೇಷನ್ ಕೋ – ಆರ್ಡಿನೇಟರ್ ಸುಮ ನಿರೂಪಿಸಿ, ಸುಮನ ಧನ್ಯವಾದವಿತ್ತರು.

Exit mobile version