Site icon Suddi Belthangady

ನೇತ್ರಾವತಿ ಸ್ನಾನಘಟ್ಟದಲ್ಲಿ ಇಂದು ಡ್ರೋನ್ ಜಿಪಿಆರ್ ನಲ್ಲಿ ಶೋಧ-ಬೆಳ್ತಂಗಡಿಯತ್ತ ಆಗಮಿಸುತ್ತಿರುವ ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ

ಬೆಳ್ತಂಗಡಿ: ನೂರಾರು ಹೆಣಗಳನ್ನು ಹೂತಿಟ್ಟಿದ್ದೇನೆಂದ ಸಾಕ್ಷಿ ದೂರುದಾರನ ಪ್ರಕರಣಕ್ಕೆ ಸಂಬಂಧಿಸಿದಂತೆ ಆ.12ರಂದು ಪಾಯಿಂಟ್ ನಂಬರ್ 13ರಲ್ಲಿ ಡ್ರೋನ್ ಮೌಂಟೆಡ್ ಜಿಪಿಆರ್ ನಲ್ಲಿ ಶೋಧ ಕಾರ್ಯ ನಡೆಯಲಿದೆ. ಈಗಾಗಲೇ ಜಿಪಿಆರ್ ಡೆಮೋ ನಡೆದಿದ್ದು, ಇಂದು ಗುರುತು 13ರಲ್ಲಿ ಶೋಧ ಕಾರ್ಯ ನಡೆಯಲಿದ್ದು, ಕುರುಹು ಪತ್ತೆಯಾದ್ರೆ ಉತ್ಖನನ ಕಾರ್ಯ ನಡೆಯಲಿದೆ.

ಇದರ ಜೊತೆ ಇಂದು ಎಸ್. ಐ. ಟಿ ಅಧ್ಯಕ್ಷ ಪ್ರಣವ್ ಮೊಹಾಂತಿ ಬೆಳ್ತಂಗಡಿಗೆ ಆಗಮಿಸಲಿದ್ದಾರೆ. ಈಗಾಗಲೇ ಮಂಗಳೂರಿನಿಂದ ಹೊರಟಿದ್ದು ಬೆಳ್ತಂಗಡಿಗೆ ಆಗಮಿಸುತ್ತಿದ್ದಾರೆ.

Exit mobile version