ತೋಟತ್ತಾಡಿ: ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ವರಮಹಾಲಕ್ಷ್ಮಿ ಪೂಜೆಯು ಆ. 8ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು. ಮಹಿಳಾ ವೃತದಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ದಿವಾಕರ ಪೂಜಾರಿ ಕಳೆಂಜೊಟ್ಟು, ಸದಸ್ಯರಾದ ಸನತ್ ಕುಮಾರ್ ಮೂರ್ಜೆ, ದಿನೇಶ್ ನಾಯ್ಕ ಕೋಟೆ, ವಿಜಯ ಗೌಡ ಅಗರಿ, ಚಂದ್ರಶೇಖರ ಗೌಡ ಪರಾರಿ, ಬಾಲಕೃಷ್ಣ ಗೌಡ ಪಾದೆ, ದಮಯಂತಿ ಕಜೆ, ಚಂದ್ರವತಿ ಪರಾರಿ, ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಲೋಕಯ್ಯ ಪೂಜಾರಿ ಬರಮೇಲು, ಕಾರ್ಯದರ್ಶಿ ಶಶಿಧರ ಗೌಡ ಪಿತ್ತಿಲು, ಭಜನಾ ಮಂಡಳಿ ಅಧ್ಯಕ್ಷ ಕುಶಾಲಪ್ಪ ಗೌಡ ಅಗರಿ, ಕಾರ್ಯದರ್ಶಿ ಸತೀಶ್ ಪೂಜಾರಿ ಮೂರ್ಜೆ, ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷೆ ಶೋಭಾ ಗೌಡ ಬಳ್ಳಿ, ಕಾರ್ಯದರ್ಶಿ ಶಾರದಾ ಗೌಡ ಪಿತ್ತಿಲು, ಮಿಯ್ಯಾರು, ಪುದುವೆಟ್ಟು ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಬೊಮ್ಮಣ್ಣ ಗೌಡ ಮಠ, ಕಕ್ಕಿಂಜೆ, ಚಾರ್ಮಾಡಿ ಶ್ರೀ ಇಷ್ಟ ದೇವತಾ ಕ್ಷೇತ್ರದ ಅಧ್ಯಕ್ಷ ಜಯಪ್ರಸಾದ್ ಗೌಡ ಪರಾರಿ ಹಾಗೂ ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.