ನಡ: ಆಟಿಡೊಂಜಿ ದಿನದ ಮಹತ್ವವನ್ನು ಮಕ್ಕಳಿಗೆ ತಿಳಿಸುವ ಮತ್ತು ಆಟಿ ತಿಂಗಳ ವಿಶೇಷ ಖಾದ್ಯಗಳ ಬಗ್ಗೆ ವಿಶೇಷ ಪ್ರಾತ್ಯಕ್ಷಿಕ ಕಾರ್ಯಕ್ರಮ ಆ. 7ರಂದು ನಡ ಸ. ಪ. ಪೂ. ಕಾಲೇಜಿನಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ವಹಿಸಿಕೊಂಡು ತುಳುನಾಡಿನ ಬಗ್ಗೆ ಮಾತನಾಡಿ ಹಿರಿಯರ ಮೂಢನಂಬಿಕೆಗಳು ಮೂಢನಂಬಿಕೆಗಳಲ್ಲ ಅವು ಅನುಭವದ ಮೂಲ ನಂಬಿಕೆಗಳು ಎಂದು ನುಡಿದರು.
ನಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಾ ಕಾರ್ಯಕ್ರಮ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿ ಎಸ್. ಕೆ. ಡಿ. ಆರ್. ಡಿ. ಪಿ. ಕೃಷಿ ಅಧಿಕಾರಿ ರಾಮ್ ಕುಮಾರ್ ಭಾಗವಹಿಸಿದ್ದರು. ಗ್ರಾಮಾಭಿವೃದ್ದಿ ಯೋಜನೆ ಧರ್ಮಸ್ಥಳ ಮತ್ತು ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಅಜಿತ್ ಆರಿಗ, ಸ್ಥಳೀಯರಾದ ಮುನಿರಾಜ ಅಜ್ರಿ, ಹಿರಿಯ ಉಪನ್ಯಾಸಕಿ ಲಿಲ್ಲಿ ಪಿ.ವಿ. ಕಾಲೇಜ್ ವಿದ್ಯಾರ್ಥಿ ನಾಯಕನಾದ ಕುಮಾರ್ ಭವಿತ್ ಉಪಸ್ಥಿತರಿದ್ದರು.
ರಾಮ ಕುಮಾರ್ ಭತ್ತದ ಕಳಸದಲ್ಲಿ ತೆಂಗಿನ ಹೂವನ್ನು ಅರಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ತುಳುನಾಡಿನ ಪ್ರಾಶಸ್ತ್ಯ
ಗಳು ಮತ್ತು ಮೌಲ್ಯಗಳನ್ನು ಉಳಿಸಿ ಬೆಳೆಸುವುದರ ಕುರಿತು ಮಕ್ಕಳಿಗೆ ತಿಳಿ ಹೇಳಿದರು. ಚೆನ್ನಮಣೆ ಸ್ಪರ್ಧೆ ಮತ್ತು ಒಗಟು ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿದ ವಿದ್ಯಾರ್ಥಿಗಳಿಗೆ ಉಪನ್ಯಾಸಕಿ ಸವಿತಾ ಇತಿಹಾಸ ಉಪನ್ಯಾಸಕರು ಅತಿಥಿಗಳಿಂದ ಬಹುಮಾನವನ್ನು ಕೊಡಿಸಿದರು.
ನಾನಾ ಖಾದ್ಯಗಳನ್ನು ತಯಾರು ಮಾಡಿ ತಂದ ವಿದ್ಯಾರ್ಥಿಗಳನ್ನು ಸಂಸ್ಥೆಯಿಂದ ಅಭಿನಂದಿಸಲಾಯಿತು. ಸುಕೇತ ತುಳುನಾಡಿನ ಮಹತ್ವದ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಲಿಲ್ಲಿ ಪಿವಿ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಯಿತು. ಚೇತನ ಸ್ವಾಗತಿಸಿ, ಪವಿತ್ರ ಕಾರ್ಯಕ್ರಮ ನಿರೂಪಿಸಿದರು. ಸಮಾಜಶಾಸ್ತ್ರ ಉಪನ್ಯಾಸಕಿ ಸುಕನ್ಯಾ ವಂದಿಸಿದರು.