Site icon Suddi Belthangady

ಗೋಪಾಲಕೃಷ್ಣ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ

ಬೆಳ್ತಂಗಡಿ: ಕುಡಾಳ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ ವಲಯ ಇವರ ಆಶ್ರಯದಲ್ಲಿ ಕುಡಾಳ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಮಹಿಳಾ ಸಂಘದ ವತಿಯಿಂದ ಪುಂಜಾಲಕಟ್ಟೆ ಗೋಪಾಲ ಕೃಷ್ಣ ದೇವಸ್ಥಾನದಲ್ಲಿ ನಡೆದ ವರಮಹಾಲಕ್ಷ್ಮಿ ಪೂಜೆ ನಡೆಯಿತು.

ಪೂಜಾ ಕಾರ್ಯಕ್ರಮದಲ್ಲಿ ಖ್ಯಾತ ಹೃದಯ ತಜ್ಞ ಡಾ. ಪದ್ಮನಾಬಾ ಕಾಮತ್ ಭಾಗಿಯಾಗಿ ಅವರ ಸೇವಾ ಕಾರ್ಯಕ್ಕೆ ಸನ್ಮಾನಿಸಿ ಸತ್ಕಾರಿಸಲಾಯಿತು. ಖ್ಯಾತ ಜ್ಯೋತಿಷಿ ಪೊರೋಹಿತ ರತ್ನಕರ ಭಟ್ ಮತ್ತು ಪೊರೋಹಿತ ಪ್ರಭಾಕರ್ ಭಟ್ ರವರು ಪೂಜಾ ವಿಧಿ ನೆರವೇರಿಸಿದರು. ಸಂಘದ ಅಧ್ಯಕ್ಷ ಪ್ರಭಾಕರ್ ಪ್ರಭು, ಕಾರ್ಯದರ್ಶಿ, ಖಜಾಂಚಿ, ಮಹಿಳಾ ಅಧ್ಯಕ್ಷೆ, ಕಾರ್ಯದರ್ಶಿ, ಗೌರವ ಅಧ್ಯಕ್ಷರು, ಸಂಚಾಲಕರು ಮತ್ತು ಸದಸ್ಯರು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಧ್ಯಕ್ಷರು ಪ್ರಭಾಕರ್ ಪ್ರಭು ಮೂಡಲಡ್ಕ ಅವರು ಧನ್ಯವಾದಗಳು ತಿಳಿಸಿದರು.

Exit mobile version