ಬೆಳ್ತಂಗಡಿ: ತೆಕ್ಕಾರು ಗ್ರಾಮದ ಮೂಡಡ್ಕ ಎಂಬಲ್ಲಿ 2006 ರಲ್ಲಿ ಪ್ರಾರಂಭಗೊಂಡ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ಸಂಸ್ಥೆಯಾದ ಅಲ್ ಮದೀನತುಲ್ ಮುನವ್ವರ ಎಜುಕೇಶನಲ್ ಸೆಂಟರ್ ಮೂಡಡ್ಕ ಸಂಸ್ಥೆಯು 19 ವರ್ಷಗಳನ್ನು ಪೂರ್ಣಗೊಳಿಸಿ 20ನೇ ವರ್ಷಕ್ಕೆ ಕಾಲಿಡುತ್ತಿರುವ ಸಂತೋಷದ ಸುದ್ದಿಯನ್ನು ನೆನಪಿಸಿ ಸ್ಥಾಪಕ ದಿನವನ್ನು ದ್ವಜಾರೋಹಣ ಮೂಲಕ ಆಚರಣೆ ಮಾಡಲಾಯಿತು.
ಅಲ್ ಮದೀನತುಲ್ ಮುನವ್ವರ ಸಂಸ್ಥೆಯು 19 ವರ್ಷವನ್ನು ಪೂರ್ತಿಗೊಳಿಸುವಾಗ ಹಲವಾರು ಅಂಗಸಂಸ್ಥೆಯನ್ನು ಹೊಂದಿದ್ದು ಶರೀಅತ್ ಕಾಲೇಜು, ಸೀನಿಯರ್ ಹಾಗೂ ಜೂನಿಯರ್ ದಅವಾ ಕಾಲೇಜು, ಹಿಫ್ಲುಳ್ ಕುರ್ ಆನ್ ಕಾಲೇಜು, ಅನಾಥ ನಿರ್ಗತಿಕ ಮಂದಿರ, ಹೋಂ ಕೇರ್ ಪಧ್ಧತಿ, ಅಲ್ ಮುನವ್ವರ ಆಂಗ್ಲ ಮಾದ್ಯಮ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು, ಮಹಿಳಾ ಶರೀಅತ್ ಕಾಲೇಜು ಹೀಗೆ ಹಲವಾರು ಸಂಸ್ಥೆಗಳನ್ನು ಹೊಂದಿದ್ದು ಇನ್ನೂ ಕೂಡ ಹಲವು ಕನಸುಗಳನ್ನು ಹೊಂದಿದ್ದು ಯಶಸ್ವಿಯ ಪಥದಲ್ಲಿ ಸಾಗುತ್ತಿದೆ. ಪ್ರಸ್ತುತ ಸಂಸ್ಥೆಯ 20ನೇ ವಾರ್ಷಿಕ ಮಹಾಸಮ್ಮೇಳನ ಹಾಗೂ ಮೂಡಡ್ಕ ಮಖಾಂ ಉರೂಸ್ 2026 ಜನವರಿ 7,8,9.10,11ರವರೆಗೆ ಬಹಳ ವಿಜ್ರಂಭನೆಯಿಂದ ನಡೆಯಲಿದೆ.
ಇದರ ಪ್ರಚಾರಾರ್ಥವಾಗಿ ಜು. 24ರಂದು ಸಂಸ್ಥೆಯ ಆವರಣದಲ್ಲಿ ಸ್ಥಾಪನಾ ದಿನವನ್ನು ಆಚರಿಸಲಾಯಿತು. ಅಲ್ ಮದೀನತುಲ್ ಮುನವ್ವರ ಸಂಸ್ಥೆಯ ಉಪಾಧ್ಯಕ್ಷ ಎಸ್. ಉಸ್ಮಾನ್ ಹಾಜಿ ಸರಳಿಕಟ್ಟೆ ದ್ವಜಾರೋಹಣ ನೆರವೇರಿಸಿದರು.
ಮಹಿಳಾ ಶರೀಅತ್ ಕಾಲೇಜಿನ ಪ್ರಾಂಶುಪಾಲರಾದ ಉಸ್ಮಾನ್ ಸಅದಿ ತೆಕ್ಕಾರು ದುವಾ ನೆರವೇರಿಸಿದರು. ಅಲ್ ಮದೀನತುಲ್ ಮುನವ್ವರ ಸಮೂಹ ಸಂಸ್ಥೆಗಳ ಜನರಲ್ ಮ್ಯಾನೇಜರ್ ಕೆ. ಎ. ಅಶ್ರಫ್ ಸಖಾಫಿ ಮೂಡಡ್ಕ ಸಂದೇಶ ಭಾಷಣ ಮಾಡಿ ಸಂಸ್ಥೆಯ ಪ್ರಾರಂಭದಿಂದ ಇಂದಿನವರೆಗೆ ಸಹಕರಿಸಿದ ಸರ್ವರನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಅಲ್ ಮದೀನತುಲ್ ಮುನವ್ವರ ಯುಎಇ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಕೆ.ಎಂ. ರಫೀಕ್ ತೆಕ್ಕಾರು, ಸಂಸ್ಥೆಯ ಪ್ರಾಂಶುಪಾಲ ಅಬ್ದುಲ್ ಅಝೀಝ್ ನಈಮಿ, ಅಲ್ ಮುನವ್ವರ ಆಂಗ್ಲ ಮಾದ್ಯಮ ಶಾಲೆಯ ಮುಖ್ಯ ಶಿಕ್ಷಕ ಅಬ್ದುಲ್ ಸಮದ್ ಬಿ. ಎ., ಗೋಳಿತ್ತೊಟ್ಟು ಸ. ಉ. ಹಿ. ಪ್ರಾ ಶಾಲೆಯ ಸಹಶಿಕ್ಷಕ ಅಬ್ದುಲ್ ಲತೀಫ್ ಸರಳಿಕಟ್ಟೆ, ಗ್ರಾಮ ಪಂಚಾಯತ್ ತೆಕ್ಕಾರು ಸ್ಥಳೀಯ ಸದಸ್ಯ ಕೆ. ಎಂ ಹಕೀಂ ತೆಕ್ಕಾರು ಶುಭ ಹಾರೈಸಿದರು.
ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ರಫೀಕ್ ಹಾಜಿ ಸಿಂಗಾಣಿಬೆಟ್ಟು, ಜುಮಾ ಮಸೀದಿ ಸರಳಿಕಟ್ಟೆ ಅಧ್ಯಕ್ಷ ಪಿ. ಎಂ. ಹಮೀದ್ ಹಾಜಿ, ಪುತ್ತೂರು ಡಿ. ವೈ. ಎಸ್. ಪಿ ಪೋಲೀಸ್ ಕಛೇರಿಯ ಅಧಿಕಾರಿ ಅಬ್ದುಲ್ ಸಲೀಂ ಹೆಚ್., ಸಂಸ್ಥೆಯ ಆರ್ಗನೖಸರ್ ಕರೀಂ ಲತೀಫಿ ಬೇಂಗಿಲ, ದರ್ಗಾ ಸಮಿತಿಯ ಕೋಶಾಧಿಕಾರಿ ಮಜೀದ್ ಆನಲ್ಕೆ, ಗ್ರಾಮ ಪಂಚಾಯತ್ ಸದಸ್ಯರಾದ ಅನ್ವರ್ ನೆಲ್ಲಿಪಳಿಕೆ, ಸದಸ್ಯರಾದ ದಾವುದು ಉರ್ಲಡ್ಕ, ಎಸ್. ಎಂ. ಎಸ್ ಇಬ್ರಾಹಿಂ ಮುಸ್ಲಿಯಾರ್ ಸುಲೈಮಾನ್ ಮೂಡಡ್ಕ ಉಪಸ್ಥಿತರಿದ್ದರು.
ದ್ವಜಾರೋಹಣ ಕಾರ್ಯಕ್ರಮಕ್ಕೆ ಸಂಸ್ಥೆಯಲ್ಲಿ ಕಲಿಯುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹಮ್ಮದ್ ಸಖೀರ್ ಹೊಸಮೊಗ್ರು ಸ್ವಾಗತ ಮಾಡಿದರು. ಹಾಗೂ ದರ್ಗಾ ಸಮಿತಿಯ ಸಹ ಕಾರ್ಯದರ್ಶಿ ಖಲಂದರ್ ಶಾಫಿ ಹೆಚ್. ವಂದಿಸಿದರು.