ಅರಸಿನಮಕ್ಕಿ: ಹಿಂದುತ್ವ, ರಾಷ್ಟೀಯತೆಯ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಬಿಜೆಪಿಯನ್ನು ಹಿರಿಯರು ಕಟ್ಟಿ ಬೆಳೆಸಿದ್ದಾರೆ. ಅವರ ತ್ಯಾಗ, ಪರಿಶ್ರಮವನ್ನು ನೆನಪಿಸಿಕೊಂಡು ಪಕ್ಷವನ್ನು ಸಧೃಡಗೊಳಿಸುವ ಕೆಲಸವನ್ನು ಅಭ್ಯಾಸ ವರ್ಗಗಳ ಮೂಲಕ ಮಾಡಲಾಗುತ್ತಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.
ಅರಸಿನಮಕ್ಕಿಯಲ್ಲಿ ಹತ್ಯಡ್ಕ – ರೆಖ್ಯ ಗ್ರಾಮಗಳ ಅಭ್ಯಾಸ ವರ್ಗವನ್ನು ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಮಹಾಶಕ್ತಿ ಕೇಂದ್ರದದ ಅಧ್ಯಕ್ಷ ಹರೀಶ್ ಕೊಯಿಲ, ಹತ್ಯಡ್ಕ ಶಕ್ತಿಕೇಂದ್ರ ಪ್ರಮುಖ್ ಜಯಪ್ರಸಾದ್ ಶೆಟ್ಟಿಗಾರ್, ರೆಖ್ಯ ಶಕ್ತಿ ಕೇಂದ್ರ ಪ್ರಮುಖ್ ಚೇತನ್ ಉಪಸ್ಥಿತರಿದ್ದರು.
ಅಭ್ಯಾಸ ವರ್ಗದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೀತಾರಾಮ್ ಬೆಳಾಲ್, ಮಂಡಲ ರೈತ ಮೋರ್ಚಾ ಕಾರ್ಯದರ್ಶಿ ಯೋಗೀಶ್ ಆಲಂಬಿಲ, ಅಭಿಜಿತ್ ಜೈನ್ ಮಾಹಿತಿ ನೀಡಿದರು. ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಗಣೇಶ್ ಹೊಸ್ತೋಟ ಸ್ವಾಗತಿಸಿದರು. ವೃಷಾಂಕ್ ಖಾಡಿಲ್ಕರ್ ನಿರೂಪಿಸಿದರು. ಎರಡೂ ಗ್ರಾಮಗಳ ಬೂತ್ ಅಧ್ಯಕ್ಷರು, ಕಾರ್ಯದರ್ಶಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.