ಬರೆಂಗಾಯ: ರಿಕ್ಷಾ ಮತ್ತು ಯೋಧ ಪಿಕಪ್ ನಡುವೆ ಬರೆಂಗಾಯ ಸೇತುವೆ ಬಳಿ ಆ.11ರಂದು ಅಪಘಾತ ಸಂಭವಿಸಿದ್ದು, ರಿಕ್ಷಾ ಚಾಲನೆ ಮಾಡುತ್ತಿದ್ದ ಜೀವನ್ ಮತ್ತು ಸಹ ಪ್ರಯಾಣಿಕ ಕಿಟ್ಟುವಿಗೆ ಗಾಯಗಳಾಗಿದ್ದು ತಕ್ಷಣ ಅವರನ್ನು ಉಜಿರೆಯ ಬೆನಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಅಪಘಾತದಲ್ಲಿ ರಿಕ್ಷಾ ಸಂಪೂರ್ಣ ನಜ್ಜು ಗುಜ್ಜಾಗಿದ್ದು ಅಪಘಾತದ ರಭಸಕ್ಕೆ ರಿಕ್ಷಾ ಪಲ್ಟಿಯಾಗಿದೆ. ಪಿಕಪ್ ವಾಹನದ ಮುಂಭಾಗ ಅಪಘಾತದಿಂದ ಹಾನಿಯಾಗಿದೆ.
ಬರೆಂಗಾಯ: ರಿಕ್ಷಾ ಮತ್ತು ಯೋಧ ಪಿಕಪ್ ನಡುವೆ ಅಪಘಾತ
