Site icon Suddi Belthangady

ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಷನ್ ಬೆಳ್ತಂಗಡಿ ಕ್ಷೇತ್ರ ಸಮಿತಿ ಮಹಾಸಭೆ ಅಧ್ಯಕ್ಷರಾಗಿ ರಾಜು ಪೂಜಾರಿ ಅಳದಂಗಡಿ

ಬೆಳ್ತಂಗಡಿ: ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಷನ್ ಬೆಳ್ತಂಗಡಿ ಕ್ಷೇತ್ರ ಸಮಿತಿಯ ಮಹಾಸಭೆ ಬೆಳ್ತಂಗಡಿ ಸಂತೆಕಟ್ಟೆ ಪಿನಾಕಿ ಸಭಾಭವನ ಮುಂಬಾಗದಲ್ಲಿ ಕ್ಷೇತ್ರ ಸಮಿತಿಯ ಅಧ್ಯಕ್ಷೆ ವೇದಾವತಿ ಜನಾರ್ಧನ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಅಳದಂಗಡಿ ಆದರ್ಶ ಟೈಲರ್ ಮತ್ತು ಟೆಕ್ಸ್ ಟೈಲ್ಸ್ ಮಾಲಾಕ ರಾಜು ಪೂಜಾರಿ, ಪ್ರದಾನ ಕಾರ್ಯದರ್ಶಿಯಾಗಿ ಲೆನ್ಸಿ ಡಿಸೋಜ ಟೈಲರ್ ಅಳದಂಗಡಿ, ಕೋಶಾಧಿಕಾರಿಯಾಗಿ ಶಶಿಕಲಾ ಮಡಂತ್ಯಾರು, ಉಪಾಧ್ಯಕ್ಷರಾಗಿ ವಸಂತ ಪುಜಾರಿ ಬೆಳ್ತಂಗಡಿ, ಜೊತೆ ಕಾರ್ಯದರ್ಶಿ ಪ್ರಮೀಳ ವೇಣೂರು, ಸುಜಲತಾ ಹರೀಶ್ ಅಳದಂಗಡಿ, ಜಯಶ್ರೀ, ಜಿಲ್ಲಾ ಸಮಿತಿಗೆ ಶಾಂಭವಿ ಪಿ. ಬಂಗೇರ, ಕುಶಾಲಪ್ಪ ಗೌಡ ನಾಗೇಶ್ ಕುಮಾರ್,ರವೀಂದ್ರ ವೇದಾವತಿ ಜನಾರ್ಧನ್ ಇವರುಗಳನ್ನು ಆಯ್ಕೆ ಮಾಡಲಾಯಿತು.

Exit mobile version