Site icon Suddi Belthangady

6ನೇ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್- 2025: ಮಹಮ್ಮದ್ ರಯ್ಯಾನ್ ರಿಗೆ 2 ಚಿನ್ನದ ಪದಕ

ಉಜಿರೆ: ಅನುಗ್ರಹ ಅಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಮಹಮ್ಮದ್ ರಯ್ಯಾನ್ ಆ. 10ರಂದು ಶಿವಮೊಗ್ಗದ ನೆಹರು ಇನ್ ಡೋರ್ ಸ್ಪೇಡಿಯಂನಲ್ಲಿ ನಡೆದ 6ನೇ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್- 2025 ರಲ್ಲಿ ಪ್ರಥಮ ಸ್ಥಾನ ಪಡೆದು 2 ಚಿನ್ನದ ಪದಕ ಗಳಿಸಿದ್ದಾರೆ. ಅವರು ಸತತ 2ನೇ ಬಾರಿ ಅಂತಾರಾಷ್ಟ್ರೀಯ ಮಟ್ಟದ ಕರಾಟೆಯ ಕಟಾ ಮತ್ತು ಫೈಟಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆ ದಿದ್ದಾರೆ. ಅವರು ಉಜಿರೆಯ ಆರ್ ಆರ್.ಸಿ.ಸಿ ಟಿ.ವಿ ಮಾಲಕ ಬಿ. ಎಚ್ ಇಬ್ರಾಹಿಂ ಮತ್ತು ನೂರ್ ಜಹಾನ್ ದಂಪತಿ ಪುತ್ರ. ಅವರು ಈ ಹಿಂದೆ 2024 ಸೆಪ್ಟೆಂಬರ್ ನಲ್ಲಿ ಮಂಗಳೂರಿನಲ್ಲಿ ನಡೆದ ಅಂತಾ ರಾಷ್ಟ್ರೀಯ ಕರಾಟೆಯಲ್ಲೂ ಪ್ರಥಮ ಸ್ಥಾನ ಮತ್ತು 2 ಚಿನ್ನಡ ಪದಕ ಪಡೆದಿದ್ದರು. ಅವರಿಗೆ ಸಿಹಾನ್ ಅಬ್ದುಲ್ ರಹಮಾನ್ ತರಬೇತಿ ನೀಡಿದ್ದರು.

Exit mobile version