Site icon Suddi Belthangady

ಅರಸಿನಮಕ್ಕಿ: ಪೋಷಕಾಂಶಯುಕ್ತ ಆಹಾರಗಳ ಪ್ರದರ್ಶನ ಮತ್ತು ಖಾದ್ಯ ತಿನಿಸು ತಯಾರಿಕೆ ಕಾರ್ಯಕ್ರಮ

ಅರಸಿನಮಕ್ಕಿ: ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆ. 9ರಂದು ಮಕ್ಕಳಿಂದ ಪೋಷಕಾಂಶಯುಕ್ತ ಆಹಾರಗಳ ವಸ್ತು ಪ್ರದರ್ಶನ ಮತ್ತು ಖಾದ್ಯ ತಿನಿಸು ತಯಾರಿ ಕಾರ್ಯಕ್ರಮ ನಡೆಯಿತು.

ಮಕ್ಕಳು ತಾವು ತಯಾರಿಸಿದ ಪೋಷಕಾಂಶಯುಕ್ತ ಆಹಾರ ಆರೋಗ್ಯಕ್ಕೆ ಹೇಗೆ ಸಹಕಾರಿ ಎಂಬುದರ ಕುರಿತು ಅವುಗಳನ್ನು ಪ್ರದರ್ಶಿಸಿ ಮಾಹಿತಿ ನೀಡಿದರು. ಶಾಲಾ ಅಧ್ಯಕ್ಷ ಉಪೇಂದ್ರ ಗೌಡ ಮತ್ತು ಉಪಾಧ್ಯಕ್ಷೆ ಶಶಿಕಲಾ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಗುರುಗಳಾದ ಮರೆಪ್ಪ ತಲಕೇರಿ ಕಾರ್ಯಕ್ರಮದ ಮಹತ್ವದ ಬಗ್ಗೆ ತಿಳಿಸಿದರು.

ಪೋಷಕರು ಮಕ್ಕಳಿಗೆ ಸಹಕರಿಸಿದರು. ಶಿಕ್ಷಕರು ಉಪಸ್ಥಿತರಿದ್ದರು. ಅದೇ ದಿನ ಬಂದಿರುವ ಎಲ್ಲ ಪೋಷಕರು ಶಾಲಾ ಆವರಣದಲ್ಲಿರುವ ಗಿಡಗಂಟಿ, ಪೊದೆಗಳನ್ನು ಕಡಿದು ಶ್ರಮದಾನದ ಮೂಲಕ ಶಾಲಾ ಆವರಣ ಸ್ವಚ್ಛಗೊಳಿಸಿದರು.

Exit mobile version