Site icon Suddi Belthangady

ಪದ್ಮಾಲತಾ ಕೊಲೆ ಕೇಸ್ ಮರುತನಿಖೆಗೆ ಒತ್ತಾಯ – ಎಸ್.ಐ.ಟಿ ಗೆ ದೂರು ನೀಡಲು ಬಂದ ಸಹೋದರಿ ಇಂದ್ರವತಿ

ಬೆಳ್ತಂಗಡಿ: 38 ವರ್ಷಗಳ ಹಿಂದೆ ಅಸಹಜ ಸಾವನ್ನಪ್ಪಿರುವ ಪದ್ಮಲತಾ ಕೊಲೆ ಕೇಸ್ ಮರು ತನಿಖೆಗೆ ಒತ್ತಾಯಿಸಿ ಎಸ್.ಐ.ಟಿ ಕಚೇರಿಗೆ ದೂರು ನೀಡಲು ಸಹೋದರಿ ಇಂದ್ರವತಿ ಆಗಮಿಸಿದ್ದಾರೆ.

ಎಸ್ ಐ ಟಿ ಕಚೇರಿಗೆ ದೂರರ್ಜಿಯೊಂದಿಗೆ ಬಂದ ಪದ್ಮಲತಾ ಸಹೋದರಿ ಇಂದ್ರಾವತಿ, 1987ರಲ್ಲಿ ನಡೆದ ಕೊಲೆ ಕೇಸ್ ಗೆ ಸಂಬಂಧಪಟ್ಟಂತೆ, ಸಿಒಡಿ ತನಿಖೆ ನಡೆಸಿದ್ದರೂ ಪತ್ತೆಯಾಗದ ಕೇಸ್ ಅಂತ ಹೇಳಿತ್ತು. ಆವಾಗ ಪದ್ಮಲತಾ ದೇಹವನ್ನು ದಫನ್ ಮಾಡಲಾಗಿತ್ತು.

ಈಗ ಉತ್ಖನನ ಮಾಡಿ ತನಿಖೆ ನಡೆಸುವಂತೆ ಸಿಪಿಐಎಂ ಮುಖ್ಯಸ್ಥ ಬಿ ಎಂ ಭಟ್ ನೇತೃತ್ವದಲ್ಲಿ ದೂರರ್ಜಿ ನೀಡಲು ಇಂದ್ರಾವತಿ ಬಂದಿದ್ದು, ಎಸ್ ಐ ಟಿ ಯ ಕೆಲ ಅಧಿಕಾರಿಗಳು ಬಂದ ನಂತರ ಕಚೇರಿಗೆ ಬರಲು ಅಧಿಕಾರಿಗಳು ತಿಳಿಸಿದ್ದರಿಂದ ನಂತರ ಬರುವುದಾಗಿ ಸ್ಥಳದಿಂದ ಇಂದ್ರಾವತಿ ಮತ್ತಿತರರು ವಾಪಾಸಾಗಿದ್ದಾರೆ.

Exit mobile version