ಬೆಳ್ತಂಗಡಿ: ತುಳುನಾಡು ಒಕ್ಕೂಟ ಸಂಘಟನೆಯ ನೇತೃತ್ವದಲ್ಲಿ ಆ. 10ರಂದು ನಡೆದ 5ನೇ ವರ್ಷದ ‘ಚೆನ್ನೆಮಣೆ ಗೊಬ್ಬು ಪಂಥೋ’ ಕಾರ್ಯಕ್ರಮದ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ಸಂಜೆ ನಡೆಯಿತು. ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ಒಕ್ಕೂಟದ ಅಧ್ಯಕ್ಷ ರಾಜೇಶ್ ಕುಲಾಲ್ ಬೈರೊಟ್ಟು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಪನ್ಯಾಸಕಿ ಹೇಮಾವತಿ, ನಿವೃತ್ತ ಸರಕಾರಿ ನೌಕರ ಎಂ. ಆರ್. ಪ್ರಸನ್ನ, ಸುದ್ದಿ ಬಿಡುಗಡೆ ಪತ್ರಿಕೆಯ ಹಿರಿಯ ವರದಿಗಾರ ಜಾರಪ್ಪ ಪೂಜಾರಿ ಬೆಳಾಲು ಮಾತನಾಡಿದರು.
ವೇದಿಕೆಯಲ್ಲಿ ತುಳುನಾಡು ಒಕ್ಕೂಟದಜಿ. ವಿ. ಹರೀಶ್ ಸವಣಾಲು, ಯಶೋಧರ ಕುರ್ವ ಉಪಸ್ಥಿತರಿದ್ದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ತುಳುನಾಡ ಒಕ್ಕೂಟದ ಕಾರ್ಯದರ್ಶಿ ರಾಜೀವ್ ಬಿ ಹೆಚ್. ಪ್ರಸ್ತಾವನೆಯೊಂದಿಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ತುಳುನಾಡು ಒಕ್ಕೂಟದ ಸ್ಥಾಪಕ ಅಧ್ಯಕ್ಷ ಶೈಲೇಶ್ ಆರ್. ಜೆ., ಸದಸ್ಯರು, ಸ್ಪರ್ಧಿಗಳು ಹಾಜರಿದ್ದರು.
ಬಹುಮಾನ ವಿಜೇತರು, 16 ವರ್ಷದ ಒಳಗಿನವರು
ಪ್ರಥಮ- ಅತೀಶ್
ದ್ವಿತೀಯ- ಮನ್ವಿತಾ
ತ್ರೀತಿಯ- ಯಕ್ಷಿತ್
ಚತುರ್ಥ- ದೀಕ್ಷಾ
16 ವರ್ಷದ ಮೇಲ್ಪಟ್ಟವರು
ಪ್ರಥಮ- ಪ್ರವೀಣ
ದ್ವಿತೀಯ – ಮಾಯಿಲಪ್ಪ ಗೌಡ
ತ್ರೀತಿಯ-ರಚನಾ
ಚತುರ್ಥ-ದಿವಾಕರ
ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಆಕಾಶ್ ಪೂಜಾರಿ ಗೇರುಕಟ್ಟೆ
ಮಮತಾ, ಶ್ರೀದೇವಿ ಕ್ಯಾಂಟೀನ್ ಗೋಪಾಲ, ರಚನಾ ಕೆ. ಸಿ. ರೋಡ್ ಅವರನ್ನು ಗೌರವಿಸಲಾಯಿತು. ನವೀನ್ ಪೂಜಾರಿ ಅಡ್ಕದಬೈಲು ಸ್ವಾಗತಿಸಿ, ತುಳುನಾಡು ಒಕ್ಕೂಟದ ಅಧ್ಯಕ್ಷ ಶೇಖರ್ ಗೌಂಡತಿಗೆ ಕಾರ್ಯಕ್ರಮ ನಿರೂಸಿದರು. ಅಶ್ವಿನಿ ಶೈಲೇಶ್ ವಿಜೇತರ ಪಟ್ಟಿ ವಾಚಿಸಿ ವಂದಿಸಿದರು.