ನಿಡ್ಲೆ: ಅನಾರೋಗ್ಯದಿಂದ ಬಳಲುತ್ತಿರುವ ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತ ನಿಡ್ಲೆ ಗ್ರಾಮದ ತೊಟ್ಲಾಯ ಕೃಷ್ಣಪ್ಪ ಎಂ. ಕೆ ಅವರ ಮನೆಗೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ಆಗಸ್ಟ್ 10 ರಂದು ಭೇಟಿ ನೀಡಿ ಆರೋಗ್ಯ ವಿಚಾರಿಸಿ ವೈಯಕ್ತಿಕ ಧನಸಹಾಯ ನೀಡಿದರು.
ನಿಡ್ಲೆ 210 ಬೂತ್ ಅಧ್ಯಕ್ಷರಾದ ಗಿರೀಶ್ ಗೌಡ ಮತ್ತು ಬಿಜೆಪಿ ಹಿರಿಯ ಪ್ರಮುಖರಾದ ಚಂದಪ್ಪ ಎಂ. ಕೆ. ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.