Site icon Suddi Belthangady

ಮುಂಡಾಜೆ: ಚಿಕ್ಕ ಚೊಕ್ಕ ಕಾರ್ಯಕ್ರಮ: ಸಹಾಯಹಸ್ತ ಮತ್ತು ಅರ್ಹ ನಾಗರಿಕರಿಗೆ ಆಹಾರ ಕಿಟ್ ವಿತರಣೆ

ಮುಂಡಾಜೆ: ದಿ. ನಾರಾಯಣ ತಾಮನ್ಕರ್ ಮುಂಡಾಜೆಯವರ ಸ್ಮರಣಾರ್ಥವಾಗಿ ಅವರ ಮಗ ವಿಶ್ರಾಂತ ಅಧ್ಯಾಪಕ ಶಂಕರ್ ಎನ್. ತಾಮನ್ಕರ್ ರವರು ಮತ್ತು ಸ್ವಾತಿ ತಾಮನ್ಕರ್ ಅವರು ಆ. 3ರಂದು ಪರಂಪರಾ ಮನೆಯಲ್ಲಿ ನಡೆದ ಚಿಕ್ಕ ಚೊಕ್ಕ ಕಾರ್ಯಕ್ರಮದಲ್ಲಿ ಮುಂಡಾಜೆಯ ನಾಲ್ಕು ವಿದ್ಯಾರ್ಥಿಗಳಿಗೆ ತಲಾ ರೂ. 5000ದಂತೆ ವಿದ್ಯಾರ್ಥಿ ಸಹಾಯ ಹಸ್ತವನ್ನೂ, ಮೂರು ಮಂದಿ ಅರ್ಹ ನಾಗರಿಕರಿಗೆ ಆಹಾರ ಕಿಟ್ಟನ್ನು, ಒಬ್ಬ ನಾಗರಿಕರಿಗೆ ರೂ.5000 ಆರೋಗ್ಯ ಸಹಾಯ ಹಸ್ತವನ್ನೂ ನೀಡಿರುತ್ತಾರೆ.

ಈ ಚಿಕ್ಕ ಚೊಕ್ಕ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮುಂಡಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಬಂಗೇರ, ಮುಂಡಾಜೆ ಯಂಗ್ ಚಾಲೆಂಜರ್ಸ್ ಸಂಚಾಲಕ ನಾಮದೇವ ರಾವ್, ಉದ್ಯಮಿ ಅರೆಕ್ಕಲ್ ರಾಮಚಂದ್ರ ಭಟ್ದಿ, ಗ್ರಾಮ ಪಂಚಾಯತ್ ಸದಸ್ಯ ಶಾ ಪಟವರ್ಧನ್ ಭಾಗವಹಿಸಿ ಶುಭ ಕೋರಿದರು. ಮತ್ತು ಇಂತಹ ಕಾರ್ಯಕ್ರಮಗಳು ಇತರರಿಗೆ ಮಾದರಿಯಾಗಲಿ ಎಂದು ಹಾರೈಸಿದರು. ಶಂಕರ್ ತಾಮನ್ಕರರವರು ಸ್ವಾಗತ ಮತ್ತು ವಂದನಾರ್ಪಣೆಯನ್ನು ಮಾಡಿದರು.

Exit mobile version